ಮಡಿಕೇರಿ, ಮಾ. ೨೧: ಅಹ್ಮದಿಯಾ ಮುಸ್ಲಿಂ ಜಮಾಅತ್‌ನ ಯುವ ವಿಭಾಗವಾದ ಮಜ್ಲಿಸ್ ಖುದ್ದಾಮುಲ್ ಅಹ್ಮದಿಯಾ ವತಿಯಿಂದ ಕರ್ನಾಟಕದಾದ್ಯಂತ ನಡೆಯುತ್ತಿರುವ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯ ಸಂಪಿಗೆಕಟ್ಟೆಯಿAದ ರಾಜೇಶ್ವರಿ ಶಾಲೆಯವರೆಗೆ ಸ್ವಚ್ಛತಾ ಕಾರ್ಯವನ್ನು ಯುವ ಅಧ್ಯಕ್ಷ ಹದ್ಸರ್ ಅಹ್ಮದ್ ಅವರ ನೇತೃತ್ವದಲ್ಲಿ ಕ್ಯೆಗೊಳ್ಳಲಾಗಿತ್ತು.

ಸಂಗ್ರಹಿಸಿದ ಕಸವನ್ನು ನಗರಸಭಾ ಸದಸ್ಯ ಮನ್ಸೂರ್ ಅವರ ಸಮ್ಮುಖದಲ್ಲಿ ನಗರಸಭಾ ವಾಹನಕ್ಕೆ ನೀಡಲಾಯಿತು. ಈ ಸಂದರ್ಭ ಅಹ್ಮದಿಯಾ ಮುಸ್ಲಿಂ ಜಮಾಅತ್‌ನ ಅಧ್ಯಕ್ಷ ಜಿ.ಎಂ. ಮೊಹಮ್ಮದ್ ಶರೀಫ್, ಖಾಲಿದ್ ಹಾಗೂ ಯುವ ವಿಭಾಗದ ಇತರ ಪದಾಧಿಕಾರಿಗಳು ಹಾಜರಿದ್ದರು.