ಮಡಿಕೇರಿ, ಮಾ. ೨೧: ಪ್ರಧಾನಮಂತ್ರಿ ಅವರ ಮಾರ್ಗದರ್ಶನ ಮತ್ತು ಸ್ಪೂರ್ತಿಯಿಂದ ಭಾರತ ೭೫ ನೇ ವರ್ಷದ ಸ್ಮರಣಾರ್ಥವಾಗಿ “ಆಜಾಧೀ ಕಾ ಅಮೃತ ಮಹೋತ್ಸವ” ಆಚರಿಸುತ್ತಿದೆ. ಭಾರತದ ಇತಿಹಾಸದಲ್ಲಿ ಪ್ರಸಿದ್ಧಿ ಪಡೆದ ಗಣ್ಯರ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನದೊಂದಿಗೆ, ಸ್ವಾತಂತ್ರö್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ “ಪಂಚ ಪ್ರಾಣ್’’ ಎನ್ನುವ ಮಂತ್ರವನ್ನು ಘೋಷಿಸಿದ್ದಾರೆ. ಅಮೃತ ಕಾಲ ಇಂಡಿಯಾ@೨೦೪೭ ಎನ್ನುವ ದೃಷ್ಠಿಕೋನವನ್ನು ಜನತೆಯ ಮುಂದಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆಯು ‘ಯುವ ಸಂವಾದ’ ಇಂಡಿಯಾ@೨೦೪೭” ಎನ್ನುವ ಹೊಸ ಕಾರ್ಯಕ್ರಮ ಹೊರ ತಂದಿದ್ದು, ಸಮುದಾಯ ಅಭಿವೃದ್ಧಿ ಆಧಾರಿತ ಸಂಸ್ಥೆಗಳ ಸಹಯೋಗದಲ್ಲಿ ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಏಪ್ರಿಲ್ ೧ ರಿಂದ ಮೇ ೩೧ ರವರೆಗೆ ಈ ಕಾರ್ಯಕ್ರಮ ಆಚರಿಸಲು ಉದ್ದೇಶಿಸಿದೆ.

ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಸಮುದಾಯ ಅಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿ ಅಚರಿಸಲು ಯೋಜನೆ ರೂಪಿಸಿದ್ದು, ಜಿಲ್ಲಾ ನೆಹರು ಯುವ ಕೇಂದ್ರಗಳು ಕೈಜೋಡಿಸಿ, ದೇಶದ ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸಿ, ಪ್ರಧಾನಮಂತ್ರಿ ಅವರ ಆಶಯದಂತೆ “ಪಂಚ ಪ್ರಾಣ್” ಯೋಜನೆಯನ್ನು ವ್ಯವಸ್ಥಿತ ಗುರಿಯೊಂದಿಗೆ ಸಾಧಿಸಬೇಕಾಗಿದೆ.

ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ತುಂಬಾ ನುರಿತ, ಉತ್ತಮ ಜ್ಞಾನವುಳ್ಳ ಗಣ್ಯರನ್ನು ಸೇರಿಸಿಕೊಂಡು ಈ ಪಂಚಪ್ರಾಣ್ ಯೋಜನೆಯನ್ನು ಸುಮಾರು ೫೦೦ ಕ್ಕೂ ಹೆಚ್ಚು ಯುವಜನರೊಡನೆ ಪ್ರಶ್ನೋತ್ತರದ ಮೂಲಕ ಸಂವಾದ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ. ಪ್ರತಿ ಜಿಲ್ಲೆಯಲ್ಲಿ ಸಮುದಾಯ ಅಭಿವೃದ್ಧಿ ಸಂಸ್ಥೆಗಳ ಮೂಲಕ ಮೂರು ಕಾರ್ಯಕ್ರಮ ನಡೆಸಲಾಗುವುದು. ಪ್ರತಿಯೊಂದು ಕಾರ್ಯಕ್ರಮಕ್ಕೆ ರೂ.೨೦ ಸಾವಿರ ಅನುದಾನ ನಿಗದಿಪಡಿಸಲಾಗಿದೆ. ಈ ಅನುದಾನವನ್ನು ಸಮುದಾಯ ಅಭಿವೃದ್ಧಿ ಸಂಸ್ಥೆಗಳಿಗೆ ಕೊಡಲಾಗುವುದು.

ಆದ್ದರಿಂದ ಸಮುದಾಯ ಅಭಿವೃದ್ಧಿ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷವಲ್ಲದ ಪಕ್ಷಪಾತವಿಲ್ಲದ ಮತ್ತು ಜಾತಿ ಬೇಧವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮತ್ತು ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಲು ಶಕ್ತವಾಗಿರುವ ಕೊಡಗು ಜಿಲ್ಲೆಯ ‘ಸಮುದಾಯ ಅಭಿವೃದ್ಧಿ ಸಂಸ್ಥೆಗಳು’ ಈ ಯುವ ಸಂವಾದ ಕಾರ್ಯಕ್ರಮ ನಡೆಸಲು ಮುಂದೆ ಬರಬಹುದು. ಈ ಸಂಸ್ಥೆಗಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಅಥವಾ ಸುಸ್ತಿದಾರರಲ್ಲದ ೦೩ ಸಂಸ್ಥೆಗಳನ್ನು ಕೊಡಗು ಜಿಲ್ಲೆಯಿಂದ ಆಯ್ಕೆ ಮಾಡಲಾಗುವುದು.

ಆಸಕ್ತಿ ಇರುವ ಕೊಡಗು ಜಿಲ್ಲೆಯ ಸಮುದಾಯ ಅಭಿವೃದ್ಧಿ ಸಂಸ್ಥೆಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳು ಜಿಲ್ಲಾ ನೆಹರು ಯುವ ಕೇಂದ್ರ ಕೊಡಗು ಇಲ್ಲಿ ಕೊಡಲಾಗುವುದು. ಭರ್ತಿ ಮಾಡಿದ ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ದಾಖಲೆಗಳ ಸಮೇತ ತಾ. ೨೯ ರಂದು ಸಂಜೆ ೫ ಗಂಟೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಕೊಡಗು, ನೆಹರು ಯುವ ಕೇಂದ್ರ, ಯಶು ನಿಲಯ, ಬ್ಲಾಕ್ ನಂ.೦೮, ಕಾವೇರಿ ಲೇಔಟ್, ಮಡಿಕೇರಿ-೫೭೧೨೦೧. ಕಚೇರಿ ದೂ.ಸಂ.೦೮೨೭೨-೨೨೫೪೭೦ ಮೊ. ಸಂಖ್ಯೆ. ೯೯೬೧೩೩೨೯೬೮ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಯುವ ಅಧಿಕಾರಿ ಕೆ.ಟಿ.ಕೆ. ಉಲ್ಲಾಸ್ ಅವರು ತಿಳಿಸಿದ್ದಾರೆ.