ವೀರಾಜಪೇಟೆ, ಮಾ. ೨೧ : ಎರಡು ವಾಹನಗಳಿಗೆ ಒಂದೇ ಸಂಖ್ಯೆಯನ್ನು ಅಳವಡಿಸಿಕೊಂಡು ಇಲಾಖೆಗೆ ವಂಚಿಸುತ್ತಿದ್ದ ರ್ಯಾಲಿಸ್ಟ್ ಬಂಧನವಾದ ಘಟನೆ ನಡೆದಿದೆ. ವೀರಾಜಪೇಟೆ ನಗರದ ಸುಭಾಷ್ ನಗರ ನಿವಾಸಿ ಹೋಂಡಾ ಶೋರೂಂನಲ್ಲಿ ವಾಹನಗಳಿಗೆ ಸಾಲ ಒದಗಿಸುವ ಕೆಲಸ ಮಾಡುತ್ತಿದ್ದ ಧೀರಜ್ ಎಂ.ಎA. (೩೮) ಬಂಧಿತ ವ್ಯಕ್ತಿ.
ವಾಹನ ಚಾಲನೆ ಕಲಿತ ಈತನಿಗೆ ನಾಲ್ಕು ಚಕ್ರ ವಾಹನವನ್ನು ಖರೀದಿಸಿ, ವಾಹನದ ಸ್ವರೂಪವನ್ನು ಬದಲಾಯಿಸುವುದು, ಟ್ರಾö್ಯಕ್ನಲ್ಲಿ ಓಡಿಸುವುದು, ವಿವಿಧ ಬಣ್ಣಗಳನ್ನು ಬಳಿಯುವುದು ಹೀಗೆ ವಾಹನದ ಮೇಲಿನ ವ್ಯಾಮೋಹ ಅತಿಯಾಗಿತ್ತು. ಮೊದಲ ಬಾರಿಗೆ ಮಾರುತಿ ಜೆನ್ ಕಾರನ್ನು (ಕೆಎ-೦೫ ಜೆಡ್-೬೪೯೫) ಕಡಿಮೆ ಬೆಲೆಗೆ ಖರೀದಿಸಿ ಅದರ ಸ್ವರೂಪ ಬದಲಿಸಿ ಕಾರು ರ್ಯಾಲಿಯಲ್ಲಿ ಓಡಿಸಿ ಮೊದಲ ಸ್ಥಾನ ಪಡೆಯುತ್ತಾನೆ. ನಂತರದಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗಿದ್ದ ಕಾರು ರ್ಯಾಲಿಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳುತ್ತಾ ಬಂದ ಈತನ ಕಾರು ಆಯುಷ್ಯ ಕಳೆದುಕೊಂಡ ಹಿನ್ನೆಲೆಯಲ್ಲಿ ಕಾರನ್ನು ಗುಜರಿ ಅಂಗಡಿಗೆ ತಳ್ಳುತ್ತಾನೆ. ಆದರೆ ಆ ಕಾರಿನ ಸಂಖ್ಯೆಯ ಮೇಲಿದ್ದ ಮೋಹದಿಂದ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಿ, ತನಗೆ ಮನಬಂದAತೆ ಅದರ ಸ್ವರೂಪ ಬದಲು ಮಾಡಿ ವಿವಿಧ ರೀತಿಯ ವಾಹನದ ಬಿಡಿಭಾಗಗಳನ್ನು ಜೋಡಣೆ ಮಾಡಿಕೊಂಡು ವಾಹನಕ್ಕೆ ಒಂದೇ ಸಂಖ್ಯೆಯನ್ನು ಅಳವಡಿಸಿಕೊಂಡು ಚಾಲನೆ ಮಾಡುತ್ತಿದ್ದ. ಒಟ್ಟು ಎರಡು ವಾಹನಗಳಿಗೆ ಒಂದೇ ರೀತಿಯ ಸಂಖ್ಯೆ ಅಳವಡಿಸಿಕೊಂಡು ಚಾಲನೆ ಮಾಡುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ತಾ. ೧೮ ರಂದು ಧೀರಜ್ ಆರ್ಜಿ ಗ್ರಾಮದ ಬಳಿ ತೆರಳುತ್ತಿದ್ದ ಸಂದರ್ಭ ಆತನನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕ್ರಮಕೈಗೊಂಡಿದ್ದಾರೆ.
-ಕಿಶೋರ್ ಕುಮಾರ್ ಶೆಟ್ಟಿ