ಚೆಯ್ಯಂಡಾಣೆ, ಮಾ. ೨೧: ನಾಪೋಕ್ಲು ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಅಣಕು ಮತದಾನ ಜಾಗೃತಿ ಕಾರ್ಯ ಕ್ರಮ ನಡೆಸಲಾಯಿತು. ನಾಪೋಕ್ಲು ಸಂತೆ ಮಾರು ಕಟ್ಟೆಯಲ್ಲಿ ಚುನಾವಣಾ ಸೆಕ್ಟರ್ ಅಧಿಕಾರಿಗಳಾದ ಮುರುಗೇಶ್ ಮತ್ತು ಪ್ರಮೋದ್ ನೇತೃತ್ವದಲ್ಲಿ ವಿದ್ಯುನ್ಮಾನ ಮತಯಂತ್ರದ ಬಳಕೆ ಮತ್ತು ಮತದಾನ ಮಾಡುವ ಕುರಿತು ಸಾರ್ವ ಜನಿಕರಿಗೆ ಮಾಹಿತಿ ನೀಡಲಾಯಿತು. ಹಲವಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೊದಲ ಬಾರಿಗೆ ಮತ ಚಲಾಯಿಸಿದರು. ಈ ಸಂದರ್ಭ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾ.ಪಂ. ಅಭಿವೃದ್ಧಿ ಆಧಿಕಾರಿ ಚೋಂದಕ್ಕಿ, ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಪ್ರಸಾದ್, ಲಾಲು, ಸ್ಥಳೀಯರಾದ ಅಹಮದ್ ಸಿ.ಹೆಚ್. ಮಹಮ್ಮದ್, ಗಣೇಶ್, ಪ್ರಕಾಶ್ ಮತ್ತಿತರರು ಹಾಜರಿದ್ದರು.