ಮಡಿಕೇರಿ, ಮಾ. ೨೧: ಗುಡ್ಡೆಹೊಸೂರು ಸಮೀಪದ ಬಾಳುಗೋಡು ವ್ಯಾಪ್ತಿಯ ರಸುಲ್‌ಪುರ ಕಲ್ಲುಮಂಟಿ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯ ಮಂಡಳಿ ಅಧ್ಯಕ್ಷ ಈರಪ್ಪ ಪಿ.ಬಿ., ಕಾರ್ಯದರ್ಶಿ ರಾಮಚಂದ್ರ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳನ್ನು ಯೋಗೇಶ್ ಭಟ್ಟರು ನೆರವೇರಿಸಿಕೊಟ್ಟರು. ಬೆಳಗ್ಗಿನಿಂದಲೇ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಎಲ್ಲರಿಗೂ ದೇವರ ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಿತು.