ನಾಪೋಕ್ಲು, ಮಾ. ೨೧: ಯಾವ ಮನೆಯಲ್ಲಿ ಸ್ತಿçà ವಿದ್ಯಾವಂತ ಳಾಗಿರುತ್ತಾಳೋ ಆ ಕುಟುಂಬ ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂದು ಶಿಕ್ಷಕಿ ಮುಂಡAಡ ಕವಿತಾ ಅಯ್ಯಣ್ಣ ಹೇಳಿದರು.
ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕಿ ಮುಂಡAಡ ಕವಿತಾ ಅಯ್ಯಣ್ಣ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಪೋಷಕರ ಗುಣ, ನಡತೆ, ಮಾರ್ಗದರ್ಶನದಿಂದ ಮಕ್ಕಳ ವಿದ್ಯಾಭ್ಯಾಸ, ಉನ್ನತಿ, ಹಣಕಾಸು ನಿರ್ವಹಣೆ ಉತ್ತಮ ವಾಗಲಿದೆ ಎಂದು ಹೇಳಿದರು.
ಸಹಕಾರಿ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಮಾತನಾಡಿದರು.
ಈ ಸಂದರ್ಭ ಶಿಕ್ಷಕಿ ಮುಂಡAಡ ಕವಿತಾ ಅಯ್ಯಣ್ಣ ಅವರನ್ನು ಸನ್ಮಾನಿಸಲಾಯಿತು.
ಮಹಿಳೆಯರಿಗಾಗಿ ವಿವಿಧ ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ವೇದಿಕೆ ಯಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರುಗಳಾದ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕೇಟೋಳಿರ ಶಾರದಾ ಪಳಂಗಪ್ಪ, ಮುಂಡAಡ ಸುಶೀಲ ಸೋಮಣ್ಣ, ಅಪ್ಪಾರಂಡ ಡೈಸಿ ತಿಮ್ಮಯ್ಯ, ಪುಲ್ಲೇರ ಪದ್ಮಿನಿ, ಬಿದ್ದಾಟಂಡ ಗಿರಿಜಾ ಬೋಪಣ್ಣ, ಕುಂಡಿಯೋಳAಡ ಕವಿತಾ, ರಾಜೇಶ್ವರಿ ಲೋಕೇಶ್ ಉಪಸ್ಥಿತರಿದ್ದರು.