ಮಡಿಕೇರಿ, ಮಾ. ೨೧: ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರೋರ್ವರಿಗೆ ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯಿAದ ಆರ್ಥಿಕ ನೆರವು ನೀಡಲಾಯಿತು. ನಗರದ ರೈಫಲ್ ರೇಂಜ್ ಬಡಾವಣೆ ನಿವಾಸಿ ವೇಲಾಯುಧನ್ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು, ಇವರಿಗೆ ಚಿಕಿತ್ಸೆಗೆ ಅಗತ್ಯವಾಗಿದ್ದ ಆರ್ಥಿಕ ನೆರವಾಗಿ ರೂ. ೫ ಸಾವಿರಗಳನ್ನು ಇನ್ನರ್ ವೀಲ್ ಸಂಸ್ಥೆಯಿAದ ನೀಡಲಾಯಿತು.

ಇನ್ನರ್ ವೀಲ್ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್, ಕಾರ್ಯದರ್ಶಿ ಲಲಿತಾ ರಾಘವನ್, ಸದಸ್ಯರಾದ ಮಲ್ಲಿಗೆ ಪೈ, ಉಮಾಗೌರಿ, ಆ್ಯಗ್ನೇಸ್ ಮುತ್ತಣ್ಣ, ರಾಧಿಕ ವಿಶ್ವನಾಥ್ ಹಾಜರಿದ್ದರು.