*ಗೋಣಿಕೊಪ್ಪ, ಮಾ. ೨೦: ರೂ. ೪೫ ಲಕ್ಷ ಅನುದಾನದಲ್ಲಿ ಅಮ್ಮತ್ತಿ, ಹೊಸೂರು, ಗೋಣಿಕೊಪ್ಪ ರಸ್ತೆ ದುರಸ್ತಿ ಮತ್ತು ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅಮ್ಮತಿ-ಹೊಸೂರು ಜಂಕ್ಷನ್ ರಸ್ತೆಯಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಹಾತೂರು ಗ್ರಾ.ಪಂ. ಸದಸ್ಯರುಗಳಾದ ಕುಲ್ಲಚಂಡ ಚಿಣ್ಣಪ್ಪ, ಸುಮಾ, ಅಕ್ಕಮ, ಪೊನ್ನಪ್ಪ, ಸುನೀತಾ, ಪ್ರಮುಖರುಗಳಾದ ಕಾವೇರಪ್ಪ, ಅಯ್ಯಪ್ಪ, ಶಾಸಕರ ಅಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಅರ್ಚಕ ಮೋಹನ್ ಹಾಗೂ ಇತರರು ಇದ್ದರು.ಸುಮಾ, ಅಕ್ಕಮ, ಪೊನ್ನಪ್ಪ, ಸುನೀತಾ, ಪ್ರಮುಖರುಗಳಾದ ಕಾವೇರಪ್ಪ, ಅಯ್ಯಪ್ಪ, ಶಾಸಕರ ಅಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಅರ್ಚಕ ಮೋಹನ್ ಹಾಗೂ ಇತರರು ಇದ್ದರು.