ಮಡಿಕೇರಿ, ಮಾ. ೨೦: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ಬ್ರಿಗೇಡಿಯರ್ ರಾಜೇಶ್ ಫಣಿಕರ್ ವಿ.ಎಸ್.ಎಂ. ಅವರು ಮಾಜಿ ಸೈನಿಕರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದರು.

ವೀರಾಜಪೇಟೆ

ಮಾಜಿ ಸೈನಿಕರ ಸಹಕಾರ ಸಂಘದ ಮಿಲಿಟರಿ ಕ್ಯಾಂಟಿನ್‌ಗೆ ಬೆಂಗಳೂರು ಸಬ್‌ಏರಿಯಾದ ಡೆಪ್ಯೂಟಿ ಜೆ.ಒ.ಸಿ ಬ್ರಿಗೆಡಿಯರ್ ಪಣಿಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಜಿ ಯೋಧರ ಸಮಸ್ಯೆಗಳನ್ನು ಆಲಿಸಿದರು.

ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಮಾಹಿತಿ ನೀಡಿ ಅಗತ್ಯ ಪ್ರಮಾಣದ ಸರಕುಗಳು ಸರಬರಾಜಾಗುತ್ತಿಲ್ಲ. ಸದಸ್ಯರುಗಳ ಸಂಖ್ಯೆ ಜಾಸ್ತಿ ಆಗುತ್ತಿರುವುದರಿಂದ ಇನ್ನಷ್ಟು ಸರಕುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು ಎಂದಾಗ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭ ಪಾಲಿಕ್ಲಿನಿಕ್‌ಗೆ ಭೇಟಿ ನೀಡಿ ಕರ್ನಲ್ ಲಕ್ಷಿನಾರಾಯಣ್ ಅವರಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ಭೇಟಿ ಸಂದರ್ಭ ಸಂಘದ ಮಾಜಿ ಅಧ್ಯಕ್ಷ ಪುಗ್ಗೆರ ನಂದಾ, ಖಜಾಂಚಿ ತೋರೆರ ಪೂವಯ್ಯ, ವ್ಯವಸ್ಥಾಪಕ ಡಾಲಿ ಮತ್ತಿತರರು ಇದ್ದರು.