ಮಡಿಕೇರಿ, ಮಾ. ೨೦: ತಾ. ೧೫ ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ ೪೧ನೇ ಘಟಿಕೋತ್ಸವದಲ್ಲಿ ಮಡಿಕೇರಿಯ ಸಹನಾ ದಿನೇಶ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಇವರು ಮಂಗಳೂರು ವಿಶ್ವ ವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ. ವೈ.ಮುನಿರಾಜು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ‘‘ಂ sಣuಜಥಿ oಟಿ ಔಟಿಟiಟಿe ಒಚಿಡಿಞeಣiಟಿg Sಣಚಿಡಿಣegies ತಿiಣh Sಠಿeಛಿiಚಿಟ ಖeಜಿeಡಿeಟಿಛಿe ಣo ಆisಛಿouಟಿಣ ಚಿಟಿಜ ಆeಟiveಡಿಥಿ ಒeಛಿhಚಿಟಿisms iಟಿ ಏಚಿಡಿಟಿಚಿಣಚಿಞಚಿ’’ ಎಂಬ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ. ಪದವಿ ಲಭಿಸಿದೆ. ಇವರು ಮಡಿಕೇರಿ ನಿವಾಸಿ ವತ್ಸಲಾ ಮತ್ತು ದಿನೇಶ್ ದಂಪತಿ ಪುತ್ರಿ. ಪ್ರಸ್ತುತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.