ಮಡಿಕೇರಿ, ಮಾ. ೨೦: ಮಧ್ಯರಾತ್ರಿಯ ಇರುಳಿನಲ್ಲಿ ಪ್ರಕಾಶಯುತ ಹೊನಲು ಬೆಳಕಿನಾಶ್ರಯದಲ್ಲಿ ರಾಷ್ಟಿçÃಯ ಮಟ್ಟದಲ್ಲೂ ಹೆಸರು ಮಾಡಿರುವ ವಾಲಿಬಾಲ್‌ನ ಘಟಾನುಘಟಿ ಕ್ರೀಡಾಪಟುಗಳು ‘ಸ್ಮಾö್ಯಶ್’ ಮೇಲೆ ‘ಸ್ಮಾö್ಯಶ್’ ಬಾರಿಸುವ ಮೂಲಕ ಬಿರುಸಿನ ವಾಲಿಬಾಲ್ ಪ್ರದರ್ಶನ ನೀಡಿ ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳ ಮನರಂಜಿಸಿದರು. ಕರ್ನಾಟಕ ರಾಜ್ಯ ಅಡಕ್ ವಾಲಿಬಾಲ್ ಅಸೋಸಿಯೇಷನ್, ಕೊಡಗು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಹಾಗೂ ಹೆಚ್.ಡಿ ದೇವೇಗೌಡ ಅಭಿಮಾನಿಗಳ ಬಳಗದ ಸಂಯುಕ್ತಾಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಕೆಳಗಿನ ಮೈದಾನದಲ್ಲಿ ತಾ.೧೮ ಹಾಗೂ ೧೯ ರಂದು ೨ ದಿನಗಳ ರಾಷ್ಟಿçÃಯ ಮಟ್ಟದ ಲೀಗ್ ಮಾದರಿಯ ವಾಲಿಬಾಲ್ ಜರುಗಿತು. ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ೨ ದಿನಗಳೂ ಹೊನಲು ಬೆಳಕಿನಲ್ಲಿ ಪಂದ್ಯಾಟ ಜರುಗಿತು. ಎರಡನೆಯ ದಿನದ ಪಂದ್ಯಾಟವು ರಾತ್ರಿಯಿಂದ ಮುಂದಿನ ದಿನ ಬೆಳಗ್ಗಿನ ಜಾವ ೫ ಗಂಟೆಯವರೆಗೂ ನಡೆದು ಕ್ರೀಡಾಸಕ್ತರಿಗೆ ವಿಭಿನ್ನ ಅನುಭವ ನೀಡಿತು.