ಮಡಿಕೇರಿ, ಮಾ. ೨೦ : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ವತಿಯಿಂದ ಕೊಡಗಿನ ಏಲಕ್ಕಿ ಬೆಳೆಗಾರರಿಂದಲೇ ಖರೀದಿಸಿದ ಅಪ್ಪಟ ಏಲಕ್ಕಿಯಿಂದ ಆಕರ್ಷಕ ಏಲಕ್ಕಿ ಹಾರ ತಯಾರಿಸಿ ಶೀಘ್ರ ಮಾರುಕಟ್ಟೆಗೆ ಬಿಡಲಾಗುವುದು ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನ ಏಲಕ್ಕಿ ವಿಶ್ವ ಪ್ರಸಿದ್ಧವಾಗಿದ್ದು, ಸಭೆ-ಸಮಾರಂಭ ಮತ್ತಿತರ ಏಲಕ್ಕಿ ಸಹಕಾರ ಸಂಘದಿAದ

ಶೀಘ್ರದಲ್ಲೇ ಏಲಕ್ಕಿ ಹಾರ

(ಮೊದಲ ಪುಟದಿಂದ) ಕಾರ್ಯಕ್ರಮಗಳಲ್ಲಿ ಏಲಕ್ಕಿ ಹಾರವನ್ನು ಬಳಸುವುದರಿಂದ ಬೆಳೆಗಾರರಿಗೂ ಸಹಕಾರಿಯಾಗಲಿದೆ. ಏಲಕ್ಕಿ ಹಾರವನ್ನು ಹೂವಿನ ಹಾರದಂತೆ ಎಸೆಯುವ ಅಗತ್ಯವಿಲ್ಲ, ಇದು ಸಂಗ್ರಹ ಯೋಗ್ಯವಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೂ ಏಲಕ್ಕಿ ಹಾರವನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸ್ಥಳೀಯ ಹಾರ ತಯಾರಕರನ್ನು ಗುರುತಿಸಿ ಅಗತ್ಯವಿದ್ದರೆ ಸಂಘದಿAದಲೇ ತರಬೇತಿ ನೀಡಲಾಗುವುದು. ವಿವಿಧ ಗಾತ್ರದ ಹಾರ ತಯಾರಿಸಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಏಲಕ್ಕಿ ಬೆಳೆಗಾರರಿಗೆ ಪ್ರೋತ್ಸಾಹ ಮತ್ತು ಫಸಲಿಗೆ ಉತ್ತಮ ದರ ಸಿಗಬೇಕು, ವ್ಯಾಪಾರದಲ್ಲಿ ಗ್ರಾಹಕರಿಗೆ ವಂಚನೆಯಾಗಬಾರದು ಎನ್ನುವ ಉದ್ದೇಶದಿಂದ ಈ ರೀತಿಯ ವಿನೂತನ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸೂದನ ಈರಪ್ಪ ಸ್ಪಷ್ಟಪಡಿಸಿದ್ದಾರೆ.