ಕಾಂಗ್ರೆಸ್ ಗ್ಯಾರಂಟಿ ನಂಬರ್ ೪: ನಿರುದ್ಯೋಗಿ ಪದವೀಧರರಿಗೆ ಭತ್ಯೆ
ಬೆಳಗಾವಿ, ಮಾ. ೨೦: ವಿಧಾನಸಭೆ ಚುನಾವಣೆ ಗೆಲ್ಲಲು ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದ ಜನತೆಗೆ ಹಲವು ಗ್ಯಾರಂಟಿಗಳನ್ನು ನೀಡುತ್ತಿದ್ದು, ಸೋಮವಾರ ತನ್ನ ೪ನೇ ಗ್ಯಾರಂಟಿಯನ್ನು ಘೋಷಿಸಿದೆ. ಈ ಮೂಲಕ ಚುನಾವಣೆಯಲ್ಲಿ ಯುವಕರ ಮತ ಸೆಳೆಯಲು ಮುಂದಾಗಿದೆ. ಇಂದು ಬೆಳಗಾವಿಯಲ್ಲಿ ನಡೆದ ಯುವ ಕ್ರಾತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ನ ‘ಯುವನಿಧಿ’ ಎಂಬ ೪ನೇ ಗ್ಯಾರಂಟಿಯನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಯುವಕರನ್ನು ಗಮನದಲ್ಲಿಟ್ಟುಕೊಂಡು ‘ಯುವನಿಧಿ’ ಯೋಜನೆ ಘೋಷಿಸಿದ್ದು, ಈ ಯೋಜನೆ ಅಡಿ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ ಮೂರು ಸಾವಿರ ರೂಪಾಯಿ ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ ೧೫೦೦ ರೂ. ಭತ್ಯೆ ನೀಡುವುದಾಗಿ ಭರವಸೆ ನೀಡಿದೆ. ಈ ಹಿಂದೆ ಗೃಹ ಲಕ್ಷಿö್ಮ ಯೋಜನೆ ಅಡಿ ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ, ೨೦೦ ಯೂನಿಟ್ ಉಚಿತ ವಿದ್ಯುತ್ ಮತ್ತು ಅನ್ನಭಾಗ್ಯ ಯೋಜನೆಯಡಿ ಬಡಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು ೧೦ ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಈ ಯೋಜನೆ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ೨ ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ ೩೦೦೦ ಆರ್ಥಿಕ ನೆರವು ಹಾಗೂ ನಿರುದ್ಯೋಗಿ ಡಿಪ್ಲೊಮಾ ಪಧವೀಧರರಿಗೆ ೧೫೦೦ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಘೋಷಿಸುತ್ತಿದ್ದೇವೆ. ಯುವ ಶಕ್ತಿಗೆ ಶಕ್ತಿ ತುಂಬಲು ಬದ್ಧವಾಗಿದ್ದೇವೆ ಎಂದು ಹೇಳಿದೆ.
ಮಹಾರಾಷ್ಟç ಸರ್ಕಾರಿ ನೌಕರರಿಗೆ ಒಪಿಎಸ್ಗೆ ಸಮಾನವಾದ ಸೌಲಭ್ಯ; ಮುಷ್ಕರ ವಾಪಸ್
ಮುಂಬೈ, ಮಾ. ೨೦: ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದ ಮಹಾರಾಷ್ಟç ಸರ್ಕಾರಿ ನೌಕರರು ಸೋಮವಾರ ಮುಷ್ಕರವನ್ನು ಹಿಂತೆಗೆದುಕೊAಡಿದ್ದಾರೆ. ನೌಕರರ ಸಂಘದ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಡುವೆ ಇಂದು ನಡೆದ ಮಾತುಕತೆ ಯಶಸ್ವಿಯಾಗಿದ್ದು, ಮುಷ್ಕರ ವಾಪಸ್ ಪಡೆಯುತ್ತಿರುವುದಾಗಿ ಯೂನಿಯನ್ ಮುಖಂಡರೊಬ್ಬರು ತಿಳಿಸಿದ್ದಾರೆ. ಹೊಸ ಪಿಂಚಣಿ ವ್ಯವಸ್ಥೆಯ (ಎನ್ಪಿಎಸ್) ಭಾಗವಾಗಿರುವ ನೌಕರರಿಗೂ ಒಪಿಎಸ್ಗೆ ಸಮಾನವಾದ ಹಣಕಾಸು ಸೌಲಭ್ಯಗಳನ್ನು ವಿಸ್ತರಿಸಲು ರಾಜ್ಯ ಸರ್ಕಾರ ‘ತಾತ್ವಿಕವಾಗಿ’ ಒಪ್ಪಿಕೊಂಡಿದೆ ಎಂದು ಮುಷ್ಕರ ನಿರತ ಒಕ್ಕೂಟಗಳ ಸಮನ್ವಯ ಸಮಿತಿಯ ಸಂಚಾಲಕ ವಿಶ್ವಾಸ್ ಕಾಟ್ಕರ್ ಹೇಳಿದ್ದಾರೆ. ೨೦೦೫ರಲ್ಲಿ ಸ್ಥಗಿತಗೊಂಡಿದ್ದ ಒಪಿಎಸ್ ಅನ್ನು ಮತ್ತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾರ್ಚ್ ೧೪ರಿಂದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರು.
ಪಾಟ್ನಾ ರೈಲು ನಿಲ್ದಾಣದ ಟಿವಿಯಲ್ಲಿ ಪೋರ್ನ್ ಪ್ರಸಾರ: ಏಜೆನ್ಸಿಯ ಒಪ್ಪಂದ ರದ್ದು
ಪಾಟ್ನಾ, ಮಾ. ೨೦: ಪಾಟ್ನಾ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ ೧೦ರಲ್ಲಿ ಅಳವಡಿಸಲಾದ ಟಿವಿಯಲ್ಲಿ ಪೋರ್ನ್ ಕ್ಲಿಪ್ ಅನ್ನು ಪ್ರದರ್ಶಿಸಿದ ಒಂದು ದಿನದ ನಂತರ, ರೈಲು ನಿಲ್ದಾಣದಲ್ಲಿ ಟಿವಿ ಜಾಹೀರಾತು ಗಳನ್ನು ಪ್ರಸಾರ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಏಜೆನ್ಸಿಯ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ರೈಲ್ವೆ ಇಲಾಖೆ ಸೋಮವಾರ ಹೇಳಿದೆ. ಈಸ್ಟ್ ಸೆಂಟ್ರಲ್ ರೈಲ್ವೆಯ (ಇಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರೇಂದ್ರ ಕುಮಾರ್ ಅವರು ಈ ಸಂಬAಧ ಪ್ರಕಟಣೆ ನೀಡಿದ್ದು, ಏಜೆನ್ಸಿಯ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸ (ಜಿಆರ್ಪಿ)ರು ತಲಾ ಒಂದು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಮಾರ್ಚ್ ೧೯ ರಂದು ಪಾಟ್ನಾ ಜಂಕ್ಷನ್ನ ಪ್ಲಾಟ್ಫಾರ್ಮ್ ಸಂಖ್ಯೆ ೧೦ ರಲ್ಲಿ ನಡೆದ ಅಸಹ್ಯಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ದತ್ತಾ ಸ್ಟುಡಿಯೋ ಕಂಪನಿ ಪ್ರೆöÊವೇಟ್ ಲಿಮಿಟೆಡ್ ವಿರುದ್ಧ ಎರಡು ಎಫ್ಐಆರ್ ಗಳನ್ನು ದಾಖಲಿಸಲಾಗಿದೆ. ಒಂದು ಎಫ್ಐಆರ್ ಅನ್ನು ಆರ್ಪಿಎಫ್ ಮತ್ತು ಇನ್ನೊಂದನ್ನು ಜಿಆರ್ಪಿ ಐಟಿ ಕಾಯ್ದೆಯಡಿ ದಾಖಲಿಸಿದೆ. ಹಾಗೆಯೇ, ಅದರ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಈ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಮತ್ತು ಅದರ ಮೂಲಕ ಕಾರ್ಯನಿರ್ವಹಿಸುವ ಎಲ್ಲಾ ಟಿವಿಗಳ ಸಂಪರ್ಕ ಕಡಿತಗೊಳಿಸಲಾಗಿದೆ/ಲಾಗ್ ಔಟ್ ಮಾಡಲಾಗಿದೆ. ಘಟನೆ ಕುರಿತು ಆರ್ಪಿಎಫ್ ಮತ್ತು ಜಿಆರ್ಪಿ ತನಿಖೆ ನಡೆಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ತಮಿಳುನಾಡು ಬಜೆಟ್: ಮನೆಯ ಯಜಮಾನಿಗೆ ೧,೦೦೦ ರೂ. ನೆರವು
ಚೆನ್ನೆöÊ, ಮಾ. ೨೦: ಆಡಳಿತಾರೂಢ ಡಿಎಂಕೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಕುಟುಂಬದ ಯಜಮಾನಿಗೆ ತಿಂಗಳಿಗೆ ೧೦೦೦ ರೂಪಾಯಿ ನೆರವು ನೀಡುವುದಾಗಿ ಸೋಮವಾರ ಬಜೆಟ್ನಲ್ಲಿ ಘೋಷಿಸಿದ್ದು, ಈ ಯೋಜನೆಯನ್ನು ಸೆಪ್ಟೆಂಬರ್ನಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದೆ. ಸೆಪ್ಟೆಂಬರ್ ೧೫ ರಂದು ದ್ರಾವಿಡ ಧೀಮಂತ ಮತ್ತು ಪಕ್ಷದ ಸಂಸ್ಥಾಪಕ, ದಿವಂಗತ ಸಿಎನ್ ಅಣ್ಣಾದೊರೈ ಅವರ ಜನ್ಮದಿನದಂದು ಈ ಯೋಜನೆ ಜಾರಿಗೊಳಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ೨೦೨೪ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಪ್ರಮುಖ ಯೋಜನೆ ಜಾರಿಗೊಳಿಸುವ ಮೂಲಕ ಡಿಎಂಕೆ ತಮಿಳುನಾಡಿನ ಎಲ್ಲಾ ೩೯ ಸ್ಥಾನಗಳು ಗೆಲ್ಲಲು ತಂತ್ರ ರೂಪಿಸಿದೆ. ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಇಂದು ವಿಧಾನಸಭೆಯಲ್ಲಿ ೨೦೨೩-೨೪ನೇ ಸಾಲಿನ ಬಜೆಟ್ ಮಂಡಿಸಿದರು ಮತ್ತು ಮಹಿಳೆಯರಿಗೆ ಮಾಸಿಕ ಸಹಾಯ ಯೋಜನೆಯನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಪ್ರಾರಂಭಿಸುತ್ತಾರೆ ಎಂದು ಘೋಷಿಸಿದರು. ಈ ಯೋಜನೆ ಅನುಷ್ಠಾನಕ್ಕೆ ವಿಧಾನಗಳನ್ನು ರೂಪಿಸಲಾಗುತ್ತಿದೆ ಮತ್ತು ಯೋಜನೆಗಾಗಿ ೭,೦೦೦ ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ. ಈ ಯೋಜನೆ ‘ರಾಜ್ಯದ ಮಹಿಳೆಯರ ಸಾಮಾಜಿಕ-ಆರ್ಥಿಕ ಜೀವನದಲ್ಲಿ ಪ್ರಮುಖ ಬದಲಾವಣೆ ತರಲಿದೆ’ ಎಂದು ಹೇಳಿದರು.
ಶೇ. ೯೦ ರಷ್ಟು ಮುಸ್ಲಿಮರು ಮತಾಂತರಗೊAಡ ದಲಿತರೇ: ಬಿಹಾರ ಸಚಿವ
ಪಾಟ್ನಾ, ಮಾ. ೨೦: ಇತ್ತೀಚಿನ ದಿನಗಳಲ್ಲಿ ಬಿಹಾರದಲ್ಲಿ ರಾಜಕೀಯದ ಕಾವು ಏರತೊಡಗಿದೆ. ಒಂದೆಡೆ ಸೀಮಾಂಚಲ್ನಲ್ಲಿ ಓವೈಸಿ ಘರ್ಜಿಸುತ್ತಿದ್ದರೆ, ಮತ್ತೊಂದೆಡೆ ಮಹಾಮೈತ್ರಿಕೂಟದ ನಾಯಕರೂ ತಮ್ಮ ವಾಕ್ಚಾತುರ್ಯದಲ್ಲಿ ಹಿಂದೆಬಿದ್ದಿಲ್ಲ. ಸರ್ಕಾರಿ ಮುಸ್ಲಿಂ ನೌಕರರಿಗೆ ರಂಜಾನ್ ಮತ್ತು ಶುಕ್ರವಾರದ ರಜೆಯಲ್ಲಿ ವಿಶೇಷ ವಿನಾಯಿತಿ ನೀಡುವ ವಿಚಾರದಲ್ಲಿ ರಾಜಕೀಯ ಇನ್ನೂ ನಿಂತಿರಲಿಲ್ಲ. ಈ ಮಧ್ಯೆ ನಿತೀಶ್ ಸಂಪುಟದ ಸಚಿವರೇ ಮುಸ್ಲಿಮರ ಬಗ್ಗೆ ಹೊಸ ಹೇಳಿಕೆ ನೀಡಿ ಬಿಸಿ ಹೆಚ್ಚಿಸಿದ್ದಾರೆ. ಸಚಿವ ಅಶೋಕ್ ಚೌಧರಿ ಅವರು ಶರೀಫ್ನಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಭಾರತದಲ್ಲಿ ಶೇಕಡಾ ೯೦ ರಷ್ಟು ಮುಸ್ಲಿಮರು ಮತಾಂತರಗೊAಡಿದ್ದಾರೆ. ಲಂಡನ್ ಅಥವಾ ಅಮೆರಿಕದಿಂದ ಯಾವ ಮುಸಲ್ಮಾನರೂ ಬಂದಿಲ್ಲ. ಇವರೆಲ್ಲ ಬ್ರಾಹ್ಮಣಶಾಹಿ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆಯಲ್ಲಿ ಸಿಲುಕಿದ ದಲಿತರು. ಇದರಲ್ಲಿ ಕೆಲವರು ಬೌದ್ಧರಾದರು. ಮತ್ತೆ ಕೆಲವರು ಮುಸ್ಲಿಮರಾದರು. ಏಕೆಂದರೆ ಅಲ್ಲಿ ಅಸ್ಪೃಶ್ಯತೆ ಇರಲಿಲ್ಲ. ಅಫ್ಘಾನಿಸ್ತಾನದಿಂದ ಯಾವ ಮುಸಲ್ಮಾನರೂ ಭಾರತಕ್ಕೆ ಬಂದಿಲ್ಲ ಎಂದಿದ್ದರು. ಬಿಜೆಪಿಯನ್ನು ಗುರಿಯಾಗಿರಿಸಿಕೊಂಡು ಮಾತನಾಡಿರುವ ಸಚಿವ ಅಶೋಕ್ ಚೌಧರಿ, ಬಿಜೆಪಿ ಕೇವಲ ಅರ್ಥಹೀನ ವಾತಾವರಣವನ್ನು ಸೃಷ್ಟಿಸುತ್ತದೆ. ಹಿಂದೂ-ಮುಸ್ಲಿA ಅಂತ ವಿಭಜಿಸುವ ಕೆಲಸ ಮಾಡುವುದೇ ಬಿಜೆಪಿ ಎಂದು ಹೇಳಿದ್ದಾರೆ.
ಗ್ರಾಹಕರ ೩೪ ಲಕ್ಷ ರೂ. ದುರುಪಯೋಗ; ಬಂಧನ
ಚೆನ್ನೆöÊ, ಮಾ. ೨೦: ಶಿಕ್ಷಣ ಸಾಲಕ್ಕಾಗಿ ವಿಮಾ ಪ್ರೀಮಿಯಂಗೆ ೧೩೭ ಗ್ರಾಹಕರು ಪಾವತಿಸಿದ ೩೪.೧೦ ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ SಃIನ ಚಿಲ್ಲರೆ ಆಸ್ತಿಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಗರ ಕ್ರೆಡಿಟ್ ಸೆಲ್ (ಖಂSಒಇಅಅಅ) ಸಹಾಯಕ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ. ಆನ್ಲೈನ್ ರಮ್ಮಿ ಆಡುವ ಮೂಲಕ ಕಳೆದುಕೊಂಡಿದ್ದ ೧೫ ಲಕ್ಷ ರೂಪಾಯಿಯನ್ನು ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೆಲ್ಲೂರು ಪೊಲೀಸರ ಜಿಲ್ಲಾ ಅಪರಾಧ ವಿಭಾಗದ (ಡಿಸಿಬಿ) ಪ್ರಕಾರ, ವಿರುದುನಗರ ಮೂಲದ ೩೮ ವರ್ಷದ ಎಂ. ಯೋಗೇಶ್ವರ್ ಪಾಂಡಿಯನ್ ಬಂಧಿತನಾಗಿದ್ದು, ಜುಲೈ ೨೦೧೮ರಿಂದ ಕಟಪಾಡಿಯ ಗಾಂಧಿ ನಗರದಲ್ಲಿರುವ ಆರ್ಎಎಸ್ಎಂಇಸಿಸಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ.