ಸಿದ್ದಾಪುರ, ಮಾ. ೨೦: ಕೂರ್ಗ್ಸ್ಟಾರ್ ವತಿಯಿಂದ ಏ ೨ ಮತ್ತು ೩ ರಂದು ನೆಲ್ಯಹುದಿಕೇರಿಯ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ಕೇರಂ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕೂರ್ಗ್ ಸ್ಟಾರ್ಸ್ನ ಪ್ರಮುಖ ಅಜಿತ್ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಮುಕ್ತ ಕೇರಂ ಪಂದ್ಯಾವಳಿಯಾಗಿದ್ದು ಸಿಂಗಲ್ಸ್ ಪ್ರಥಮ ಬಹುಮಾನ ರೂ. ೪೯೯೯ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. ೨೪೯೯ ಮತ್ತು ಟ್ರೋಫಿ, ಡಬಲ್ಸ್ ಪ್ರಥಮ ಬಹುಮಾನ ರೂ. ೯೯೯೯ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. ೪೯೯೯ ಮತ್ತು ಟ್ರೋಫಿ ನೀಡಲಾಗುವುದು. ಆಸಕ್ತ ತಂಡಗಳು ತಾ. ೨೬ ರೊಳಗೆ ಹೆಸರುಗಳನ್ನು ೭೨೦೪೫೭೭೬೦೫ಗೆ ನೋಂದಾಯಿಸಿಕೊಳ್ಳಬಹುದಾಗಿದೆ.