ಯುಗಾದಿ ಎಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆ ಗಳನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪಗಳನ್ನು ಮಾಡಿಕೊಳ್ಳುವ ದಿನ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಸಂವಿದಾನವನ್ನು ವಿವೇಕಪೂರ್ವಕವಾಗಿ ಹಾಕಿಕೊಳ್ಳುವ ದಿನ. ಮಂತ್ರವೊAದರಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯನ ಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ರೂಢಿಯಲ್ಲಿ ಕರೆಯಲಾಗಿದೆ. ಯುಗಾದಿಯು ಚಾಂದ್ರಮಾನ ಪದ್ಧತಿಯ ಹೊಸ ವರ್ಷದ ಪ್ರಾರಂಭದ ದಿನ. ವರ್ಷದ ಫಸಲು ಕೈಗೆ ಬಂದು, ಆಗ ತಾನೇ ಸುಗ್ಗಿ ಮುಗಿದು ಹಿಗ್ಗಿನ ಬುಗ್ಗೆಯಾಗಿರುವ ಜನರಿಗೆ ‘ಉಂಡಿದ್ದೇ ಉಗಾದಿ, ಮಿಂದಿದ್ದೇ ದೀಪಾವಳಿ’ ಈ ಹಬ್ಬದ ಹಿರಿಮೆ-ಗರಿಮೆ ಮಹಿಮೆಗಳನ್ನು ಅಥರ್ವಣ ವೇದ, ಶತ ಪಥಬ್ರಾಹ್ಮಣ, ಧರ್ಮಸಿಂಧು ಮುಂತಾದ ಧರ್ಮಶಾಸ್ತç ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ.
ಅಸುರಿ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟö್ಯ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು ರಾಮರಾಜ್ಯವನ್ನಾಳಲು ಆರಂಭಿಸಿದ, ಅಯೋಧ್ಯೆಯ ಪ್ರಜೆಗಳು ಸಂತೋಷಪಟ್ಟು ಮನೆಯ ಮುಂದೆ ವಿಜಯ ಪತಾಕೆ ಹಾರಿಸಿದರು. ಇಂದಿಗೂ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ಧತಿ ಇದೆ. ಅದಕ್ಕಾಗಿಯೇ ಇದಕ್ಕೆ ಗುಡಿಪಾಡ್ಯ (ಗುಡಿ=ಬಾವುಟ) ಎನ್ನುತ್ತಾರೆ. ಗುಜರಾತ್, ಮಹಾರಾಷ್ಟçಗಳಲ್ಲಿ ಇದು ಸಾಮಾನ್ಯ.
ಯುಗಾದಿ ಶಾಲಿವಾಹನ ಶಕೆಯ ಆರಂಭದ ದಿನ. ದಕ್ಷಿಣ ಹಿಂದೂ ಸ್ಥಾನದಲ್ಲೆಲ್ಲಾ ಈ ಶಕೆ ಬಳಕೆಯಲ್ಲಿದೆ. ನಮ್ಮ ಪಂಚಾAಗಗಳೂ ಈ ಶಕೆ ಯನ್ನು ಹೇಳುತ್ತವೆ. ರೋಮನ್ನ ರಿಗೆ ಜನವರಿಯ ಮೊದಲನೇ ದಿನವಿದ್ದಂತೆ ಹಿಂದೂಗಳಿಗೆ ‘ಯುಗದ ಆದಿಯ ದಿನ’. ಯುಗಾದಿ ಶಕ್ತಿ ಉಪಾಸನೆಯ ಆರಂಭದ ದಿನ. ಈ ದಿನದಂದು ವಸಂತ ನವರಾತ್ರಿ ಆರಂಭ. ವರ್ಷಾಧಿಯ ವಸಂತ ಮತ್ತು ವರ್ಷ ಮಧ್ಯದ ಶರಧೃತುಗಳ ಆರಂಭಿಸಲು ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ. ಯುಗಾದಿಯ ದಿನ ಬೆಳಗಾಗೆದ್ದು ಶ್ರೀರಾಮನನ್ನು ಸ್ಮರಿಸಿ, ಮಂಗಳ ಸ್ನಾನ ಮಾಡಿ, ನವವಸ್ತçಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು-ಬೆಲ್ಲ ತಿನ್ನುವುದು, ಜೀವನವು ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ; ಸಂಪೂರ್ಣ ಸುಖಾವಕಾಶಗಳ ಅಥವಾ ದುಃಖಾವಕಾಶಗಳ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆ ಸುಖ-ದುಃಖ, ಶೀತ ಉಷ್ಣ, ಲಾಭ, ನಷ್ಟಗಳಿಂದಲೂ ಕೂಡಿದೆ. ಇವುಗಳ ಸಂಕೇತವೇ ಬೇವು-ಬೆಲ್ಲ ಇದು ಸಿಹಿ-ಕಹಿಗಳು, ಸುಖ-ದುಃಖಗಳ ಅರ್ಥ ಮಾತ್ರವೇ ಅಲ್ಲದೆ, ವೈದ್ಯಕೀಯ ಗುಣಗಳನ್ನೂ ಹೊಂದಿದೆ. ಬೇವಿನ ಎಲೆಗಳನ್ನು ಸೇವಿಸುವುದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತವೆ. ಮಾನವ ವಜ್ರದೇಹಿಯಾಗುತ್ತಾನೆ, ಸಂಪತ್ತು ಉಂಟಾಗುತ್ತದೆ, ಆಯಸ್ಸು ವೃದ್ಧಿಯಾಗುತ್ತದೆ ಎಂದು ಬೋಧಿಸುತ್ತದೆ ಆಯುರ್ವೇದ.
ಸಾಯಂಕಾಲ ಪಂಚಾAಗ ಶ್ರವಣ ಮಾಡುವುದು, ಈ ಹಬ್ಬದ ವಿಶೇಷ ಆಚರಣೆ. ಪಂಚಾAಗದ ಪ್ರಕಾರ ಫಲಾಫಲಗಳನ್ನು ಉಪಯುಕ್ತ ದಿನಗಳನ್ನು ತಿಳಿದುಕೊಂಡು ವ್ಯಾಪಾರ, ವ್ಯವಸಾಯ, ವ್ಯವಹಾರಗಳನ್ನು ನಿಯೋಜಿಸಿಕೊಳ್ಳ ಬಹುದು. ಯುಗಾದಿಯಂದು ಪೌಡ್ಯ ಬರುವಾಗ ಹೊಸ ಸಂವತ್ಸರವನ್ನು ತಿಥಿ, ವಾರ, ನಕ್ಷತ್ರಾದಿಗಳು ಉದಯಿಸುತ್ತವೆ. ಆದ್ದರಿಂದ ಪೌಡ್ಯಮಿಯಂದು ಹಬ್ಬದ ಆಚರಣೆ ಬಿದಿಗೆಯಂದು ಚಂದ್ರದರ್ಶನ ವಿಧಿಸಿದ್ದಾರೆ.
ಯುಗಾದಿಯ ದಿನದಂದು ರೈತರು ಹೊಸದಾಗಿ ಸಿದ್ಧಪಡಿಸಿರುವ ಮರದ ನೇಗಿಲುಗಳನ್ನು ಪೂಜಿಸಿ, ಬಿತ್ತನೆ ಮಾಡಿ ಎಲ್ಲಾ ಮಾದರಿಯ ಬೆಳೆಯನ್ನು ಬಿತ್ತಿ ಪೂಜಿಸುತ್ತಾರೆ. ಈ ಮಾದರಿ ಬೆಳೆ ಹುಲುಸಾಗಿ ಬಂದರೆ ಆ ವರ್ಷದ ಬೆಳೆಯೂ ಸಮೃದ್ಧ ಎಂಬ ನಂಬಿಕೆಯಿದೆ. ಸೌರಮಾನ ಯುಗಾದಿಯನ್ನು ಸೌರಮಾನದ ರೀತಿಯಲ್ಲಿ ಆಚರಿಸುವರು. ಸೂರ್ಯ ಮೇಷ ಸಂಕ್ರಾAತಿ ವೃತ್ತವನ್ನು ಪ್ರವೇಶಿಸಿದ ದಿನ. ಈ ಹಬ್ಬದ ಆಚರಣೆ ಚಾಂದ್ರಮಾನ ಯುಗಾದಿಯಂತೆಯೇ ನಡೆಯುತ್ತದೆ. ಯುಗಾದಿಯ ದಿನ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ವಾಡಿಕೆ. ಯುಗಾದಿ ಹಬ್ಬವು ಸರ್ವರಿಗೂ ಹೊಸ ಹರುಷ, ಉತ್ಸಾಹ ತರಲಿ. -ಹರೀಶ್ ಸರಳಾಯ, ಮಡಿಕೇರಿ.
ಮೊ: ೯೭೧೩೧೮೧೦೨೫೦