ಪೊನ್ನಂಪೇಟೆ.ಮಾ.೧೭: ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಗ್ರಾಮದ ಯುವಕ ಸಮೀಪದ ಕೆರೆಯೊಂದರಲ್ಲಿ ಈಜುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಗ್ರಾಮದ ರುಕ್ಮಿಣಿ ಎಂಬವರ ಪುತ್ರ ಸುನಿಲ್ (೨೮) ಮೃತ ದುರ್ದೈವಿ.
ಮಧ್ಯಾಹ್ನ ೩ ಗಂಟೆ ಸಮಯದಲ್ಲಿ ಕೆರೆಯಲ್ಲಿ ಸ್ನೇಹಿತರೊಡನೆ ಈಜುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ಶಿವು ಮತ್ತು ಅಶೋಕ ಎಂಬ ಯುವಕರು ಸಂಜೆ ಸುಮಾರು ೬.೩೦ ರ ಸಮಯದಲ್ಲಿ ಮೃತ ದೇಹವನ್ನು ಹುಡುಕಿ ಹೊರತೆಗೆದಿದ್ದಾರೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.