ಕೂಡಿಗೆ, ಮಾ. ೧೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಮಾರಿ ಬಾಣೆಯಿಂದ ಚಿಕ್ಕ ಅಳುವಾರ ಗ್ರಾಮ ಸಂಪರ್ಕ ರಸ್ತೆಯ ರೂ. ೨ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಲೋಕೋಪ ಯೋಗಿ ಇಲಾಖೆ ಇಂಜಿನಿಯರ್ ಸರ್ಜನ್ ಪೀಟರ್, ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷ ಬೀಬಿಯಣ್ಣ, ಸದಸ್ಯರಾದ ದೇವರಾಜ್, ಶಿವಕುಮಾರ್, ತೀರ್ಥನಂದ, ಯಶೋಧ ಶಿವರಾಜ್, ಶೋಭಾಪ್ರಕಾಶ್, ತೊರೆನೂರು ಶಕ್ತಿ ಕೇಂದ್ರದ ಅಧ್ಯಕ್ಷ ಮಹೇಶ ಕುಮಾರ್, ಪ್ರಮುಖರಾದ ಗಿರೀಶ್, ಜಗದೀಶ್, ವಿಕ್ರಮ, ಸಂತೋಷ, ಅರ್ಜುನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.