ಚೆಯ್ಯಂಡಾಣೆ, ಮಾ. ೧೬: ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಉಪಕೇಂದ್ರ ‘ಎ' ವತಿಯಿಂದ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್-೧೯, ಸಾಂಕ್ರಾಮಿಕ ರೋಗಗಳು, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ವಿಷಯದ ಕುರಿತಾಗಿ ಪ್ರಬಂಧ ಸ್ವರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಥಮ ಬಹುಮಾನವನ್ನು ೯ನೇ ತರಗತಿ ವಿದ್ಯಾರ್ಥಿ ತಂಜನ್ ಎಂ ಎಂ., ದ್ವಿತೀಯ ಬಹುಮಾನವನ್ನು ೮ನೇ ತರಗತಿಯ ದೀಪಿಕಾ ಸಿ.ಎಸ್, ತೃತೀಯ ಬಹುಮಾನವನ್ನು ೯ನೇ ತರಗತಿಯ ಅಂಕಿತ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ನರಿಯಂದಡ ಕೇಂದ್ರ ಪ್ರೌಢಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಸುನೀತಾ, ಸ್ಥಳೀಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಕನಕಾವತಿ ಹಾಗೂ ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.