(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಮಾ. ೧೬: ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿರುವ ನಿವೇಶನ ರಹಿತ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ನಿವೇಶನ ಒದಗಿಸಲು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಕ್ರಮವಹಿಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಹಾಗೂ ತೆರಾಲು ಗ್ರಾಮದಲ್ಲಿ ಒಟ್ಟು ೨೭ ಎಕರೆ ಜಾಗವನ್ನು ಮೀಸಲಿಡುವ ಮೂಲಕ ಜಾಗದ ಆರ್.ಟಿ.ಸಿ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹೆಸರಿಗೆ ವರ್ಗಾವಣೆಗೊಂಡಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಇರುವ ಪರಿಶಿಷ್ಟ ಪಂಗಡಗಳ ನಿವೇಶನ ರಹಿತರನ್ನು ಈಗಾಗಲೇ ಗುರುತಿಸಿರುವ ಗಿರಿಜನ ಇಲಾಖೆಯು ಸೂಕ್ತ ಜಾಗಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಅರ್ಜಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ (ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಮಾ. ೧೬: ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿರುವ ನಿವೇಶನ ರಹಿತ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ನಿವೇಶನ ಒದಗಿಸಲು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಕ್ರಮವಹಿಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಹಾಗೂ ತೆರಾಲು ಗ್ರಾಮದಲ್ಲಿ ಒಟ್ಟು ೨೭ ಎಕರೆ ಜಾಗವನ್ನು ಮೀಸಲಿಡುವ ಮೂಲಕ ಜಾಗದ ಆರ್.ಟಿ.ಸಿ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹೆಸರಿಗೆ ವರ್ಗಾವಣೆಗೊಂಡಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಇರುವ ಪರಿಶಿಷ್ಟ ಪಂಗಡಗಳ ನಿವೇಶನ ರಹಿತರನ್ನು ಈಗಾಗಲೇ ಗುರುತಿಸಿರುವ ಗಿರಿಜನ ಇಲಾಖೆಯು ಸೂಕ್ತ ಜಾಗಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಅರ್ಜಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಯತೀಶ್ ಉಲ್ಲಾಳ ಈ ಬಗ್ಗೆ ಜಾಗದ ಕಡತವನ್ನು ಅಂತಿಮಗೊಳಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳಾದ ಡಾ.ಬಿ.ಸಿ.ಸತೀಶ ಈ ಬಗ್ಗೆ ವಿಶೇಷ ಕಾಲಜಿ ವಹಿಸುವ ಮೂಲಕ ಇದೀಗ
(ಮೊದಲ ಪುಟದಿಂದ) ೨೭ ಎಕರೆ ಜಾಗವನ್ನು ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ಕಾಯ್ದಿರಿಸಿದ್ದಾರೆ. ಕಳೆದ ಹಲವು ತಿಂಗಳಿನಿAದ ನಿವೇಶನ ರಹಿತ ಗಿರಿಜನರು ಪೊನ್ನಂಪೇಟೆ ಇಓ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.
ಕೆ.ಬಾಡಗ ಪಂಚಾಯಿತಿ ವ್ಯಾಪ್ತಿಯಲ್ಲಿ ೫೦ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಈ ಗುಡಿಸಲುಗಳನ್ನು ಜಿಲ್ಲಾಡಳಿತ ಮುಂಜಾನೆಯ ವೇಳೆ ತೆರವುಗೊಳಿಸಿ, ಒಂದು ತಿಂಗಳ ನಂತರ ನಿವೇಶನ ಮಂಜೂರು ಮಾಡುವುದಾಗಿ ಉಪ ವಿಭಾಗಧಿಕಾರಿಗಳು ಭರವಸೆ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಜಿಲ್ಲಾಡಳಿತ ಸೂಕ್ತ ಜಾಗದ ಸರ್ವೆ ಕಾರ್ಯ ನಡೆಸಿ ಜಾಗವನ್ನು ಇಲಾಖೆಯ ವ್ಯಾಪ್ತಿಗೆ ಪಡೆದಿತ್ತು.
ಬಡ ವರ್ಗದ ಜನರು ನಿವೇಶನಕ್ಕಾಗಿ ವಿವಿಧ ಸಂಘಟನೆಗಳ ಮೂಲಕ ಹಲವು ಬಾರಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ಇದೀಗ ನಿವೇಶನ ರಹಿತರಿಗೆ ನಿವೇಶನ ಸಿಗುವ ಕಾಲ ಸಮೀಪಿಸುತ್ತಿದೆ. ಗಿರಿಜನ ಅಭಿವೃದ್ಧಿ ಇಲಾಖೆಯ ಮೂಲಕ ಮನೆ ಮಂಜೂರು ಕೂಡ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಕಡತ ಹಸ್ತಾಂತರ
ಬಿರುನಾಣಿ ಹಾಗೂ ತೆರಾಲು ಗ್ರಾಮದಲ್ಲಿ ಗುರುತಿಸಲಾಗಿರುವ ಒಟ್ಟು ೨೭ ಎಕರೆ ಜಾಗದ ಕಡತವನ್ನು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್, ಪೊನ್ನಂಪೇಟೆ ತಾಲೂಕು ಗಿರಿಜನ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿ ಗುರುಶಾಂತಪ್ಪ ಅವರಿಗೆ ಹಸ್ತಾಂತರ ಮಾಡಿದ್ದಾರೆ.