ಕೂಡಿಗೆ, ಮಾ. ೧೬: ಕುಶಾಲನಗರ ಚೌಡೇಶ್ವರಿ ಅಮ್ಮನವರ ದೇವಾಲಯ ಸಮಿತಿಯ ವತಿಯಿಂದ ದೇವಾಲಯ ಆವರಣದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ವಿವಿಧ ಕಲಶ ಅಭಿಷೇಕ ಪೂಜಾ ಕಾರ್ಯಕ್ರಮಗಳು ನಡೆದವು.
ಇದರ ಅಂಗವಾಗಿ ಗಣಪತಿ ಹೋಮ ನಂತರ ಕಲಾಹೋಮ, ನವಕಲಶ ಅಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಭಿಷೇಕ, ಸೇರಿದಂತೆ ಪೂಜಾ ಕೈಂಕರ್ಯಗಳು ದೇವಾಲಯದ ಆವರಣದಲ್ಲಿ ನಡೆದವು. ಪೂಜಾ ಕೈಂಕರ್ಯಗಳನ್ನು ಕುಶಾಲನಗರದ ಪರಮೇಶ್ವರ ಭಟ್ಟರ ತಂಡದವರು ನೆರವೇರಿಸಿದರು.
ಈ ಸಂದರ್ಭ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ವಿಜಯೇಂದ್ರ, ಉಪಾಧ್ಯಕ್ಷ ಸೋಮಶೇಖರ್, ಮಹೇಶ್, ಕಾರ್ಯದರ್ಶಿ ಡಿ.ವಿ. ರಾಜೇಶ್, ಸಮಿತಿಯ ಪ್ರಮುಖರಾದ, ಡಿ.ಎಸ್. ಕೋದಂಡರಾಮು, ಡಿ.ಎಸ್. ಜಗದೀಶ್, ರಾಕಿ, ಡಿ.ಸಿ. ಜಗದೀಶ್, ಪುರಸಭೆಯ ಸದಸ್ಯ ಡಿ.ಕೆ. ತಿಮ್ಮಪ್ಪ, ಖಜಾಂಚಿ ಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಸುಲೋಚನ, ಕಾರ್ಯದರ್ಶಿ ನಂದಿನಿ ಸೇರಿದಂತೆ ಸಮಿತಿಯ ಸದಸ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕುಲಭಾಂದವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.