ಕುಶಾಲನಗರ, ಮಾ. ೧೫: ಬೈಕ್ಗೆ ಜೀಪ್ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಕುಶಾಲನಗರ ಸಮೀಪ ಗುಡ್ಡೆಹೊಸೂರು ಬಳಿ ನಡೆದಿದೆ.
ಕುಶಾಲನಗರ ಗುಡ್ಡೆ ಹೊಸೂರು ನಡುವೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ಬೈಕ್ ( ಕೆ.ಎ. ೧೨. ವಿ. ೭೩೧೧) ಏಕಾಏಕಿ ಬಲಗಡೆಗೆ ತಿರುಗುತ್ತಿದ್ದ ಸಂದರ್ಭ ಹಿಂದಿನಿAದ ಬರುತ್ತಿದ್ದ ಜೀಪ್ (ಕೆ.ಎ. ೩೬ ಎಂ.ಎ. ೧೫೧೫) ಡಿಕ್ಕಿಯಾಗಿದೆ.
ಈ ಸಂದರ್ಭ ಬೈಕ್ ಸವಾರ ಪ್ರತೀಕ್ (೨೪) ತೀವ್ರ ಗಾಯಗೊಂಡು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.