ವೀರಾಜಪೇಟೆ, ಮಾ. ೧೫ : ತಾಯಿ ಎನ್ನುವ ಪದಕ್ಕೆ ಅಸಾಧ್ಯ ಎನ್ನುವುದೆ ಇಲ್ಲ. ಅಸಾಧ್ಯವನ್ನು ಸಾಧ್ಯ ಮಾಡುವುದೇ ಹೆಣ್ಣು. ಮನೆ, ಸಂಸಾರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ನಿರೂಪಿಸಿದ್ದಾಳೆ. ಅಸಾಧ್ಯ ಎನ್ನುವ ಪದ ತಾಯಿಗಿದ್ದಿದ್ದರೆ ಮಗುವಿಗೆ ಜನ್ಮ ನೀಡುತ್ತಿರಲಿಲ್ಲ. ಯಾವ ಹೆಣ್ಣು ತಾಯಿಯಾಗುತ್ತಿರಲಿಲ್ಲ. ಮನೆ, ಮಗು ಸಂಸಾರವನ್ನು ನಿಭಾಯಿಸುವ ಶಕ್ತಿಯು ಅವಳಿಗೆ ಇರುತ್ತಿರಲಿಲ್ಲ, ಎಂದು ವಿಧಾನ ಪರಿಷತ್ ಸದಸ್ಯೆ ಡಾ. ತೇಜಸ್ವಿನಿ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಮಹಿಳಾ ಸಮಾಜದಲ್ಲಿ ವೀರಾಜಪೇಟೆ ಮಹಿಳಾ ಮೋರ್ಚಾದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಕೊಡಗು ಜಿಲ್ಲೆ ಕಾವೇರಿಯ ಪುಣ್ಯಭೂಮಿ. ಕೊಡಗಿನ ನೆಲದಲ್ಲಿ ಜಾತಿ, ಧರ್ಮ, ಮತ, ಬೇಧ, ಇಲ್ಲ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿ ನೆಲ, ಜಲವನ್ನು ಉಳಿಸುವ ಶಕ್ತಿ ಈ ಮಣ್ಣಿಗಿದೆ. ನಾವು ಜಾತಿಯಿಂದ ರಾಜಕಾರಣ ಮಾಡುತ್ತಿಲ್ಲ. ಮತದಿಂದ ರಾಜಕಾರಣ ಮಾಡುವವರು. ಪಾಕಿಸ್ತಾನ ಧ್ವಜದ ಪರ ವಕಾಲತ್ತು ವಹಿಸಿದವರು, ಕೊಡವರ ಕುಲದೈವ ತಲಕಾವೇರಿಯಲ್ಲಿ ತೀರ್ಥ ಉದ್ಭವ ಹಾಗೂ ಶಬರಿಮಲೆಯಲ್ಲಿನ ಮಕರ ಜ್ಯೋತಿಯನ್ನು ಸುಳ್ಳು ಎಂದು ಪ್ರತಿಪಾದಿಸಿದ ಕಡೆಯವರ ಬಗ್ಗೆ ಜಿಲ್ಲೆಯ ಮತದಾರರು ಜಾಗೃತರಾಗಿರಬೇಕು.
ಕೊಡವರಿಗೆ ನಂಬಿಕೆ, ದ್ರೋಹ ಮಾಡಿದ ಟಿಪುö್ಪವಿನ ಜಯಂತಿ ಆಚರಿಸಿದ ಕಾಂಗ್ರೆಸ್ನ್ನು ಮಹಿಳೆಯರಾಗಿ ಬೆಂಬಲಿಸುತ್ತೀರಾ? ಎಂದು ಪ್ರಶ್ನೆ ಮಾಡಿದರು.
ಕೊಡವರ ಸ್ವಾಭಿಮಾನಕ್ಕೆ ಕಾಂಗ್ರೆಸ್ನ ಸಿದ್ದರಾಮಯ್ಯ ನೇತೃತ್ವದಲ್ಲಿದ್ದ ಸರ್ಕಾರ ಪೆಟ್ಟು ನೀಡಿತ್ತು. ಯಾವುದೇ ಕಾರಣಕ್ಕೂ ಕೊಡಗಿನ ಜನತೆಗೆ ಟಿಪುö್ಪ ಜಯಂತಿ ಮೂಲಕ ಆದ ಅವಮಾನ ಮರೆಯಬೇಡಿ. ಬೇರೆ ಸಮುದಾಯದವರಿಗೆ ಅವರದ್ದೇ ಆದ ದೇಶಗಳು ಜಗತ್ತಿನಲ್ಲಿವೆೆ. ಹಿಂದೂಗಳಿಗೆ ಭಾರತವೊಂದೇ ಹಿಂದೂಗಳ ದೇಶವಾಗಿದೆ. ಈ ಹಿಂದೂ ದೇಶವನ್ನು ವಿದ್ರೋಹಿಗಳ ಕೈಗೆ ದೊರಕದಂತೆ ನೋಡಿಕೊಳ್ಳುವಲ್ಲಿ ಹೊಣೆ ಮಹಿಳೆಯರ ಜವಬ್ದಾರಿಯಿದೆ. ಬಿಜೆಪಿಯ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಹಿಳಾ ಕಾರ್ಯಕರ್ತರು ಮಾಡಬೇಕಿದೆ ಎಂದು ಕರೆ ನೀಡಿದರು.
ಬಿಜೆಪಿ ವಿರುದ್ಧ ಶೇ.೪೦ ಕಮಿಷನ್ ಆರೋಪ ಹೊರಿಸುತ್ತಿರುವ ಕಾಂಗ್ರೆಸ್ಸಿಗರು ದೇಶವನ್ನೇ ಲೂಟಿ ಮಾಡಿದ್ದನ್ನು
(ಮೊದಲ ಪುಟದಿಂದ) ಜನ ಮರೆತಿಲ್ಲ, ಶೇ.೪೦ ಕಮಿಷನ್ ಆರೋಪಕ್ಕೆ ಸೂಕ್ತ ಸಾಕ್ಷಿ ಇಲ್ಲದೇ ಕಾಂಗ್ರೆಸ್ಸಿಗರು ಪರದಾಡುತ್ತಿದ್ದಾರೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಸ್ವಚ್ಛವಾದ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರಿಗಳಿಗೆ ಮಣೆ ಹಾಕುತ್ತಿಲ್ಲ, ರೈತನ ಕೈಗೆ ಬಿಜೆಪಿ ಸರ್ಕಾರ ೬ ಸಾವಿರ ರೂ. ನೀಡಿದೆ. ದೇಶದ ಮಾತೃಶಕ್ತಿಗೆ ಸಾಕಷ್ಟು ಯೋಜನೆಗಳನ್ನು ಬಿಜೆಪಿ ನೀಡಿದೆ. ಮಹಿಳೆಯರ ಸ್ವಾವಲಂಬನೆ, ಸ್ವಾಭಿಮಾನಿ ಜೀವನಕ್ಕೆ ಬಿಜೆಪಿ ನೀಡಿದ ಕೊಡುಗೆ ಮಹತ್ವದ್ದಾಗಿದೆ. ದೇಶ ಸಂರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರಿಗೆ ಬಿಜೆಪಿ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತಿದೆ ಎಂದರು.
ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿದೇಶಗಳಲ್ಲಿ ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಾ ದೇಶದ್ರೋಹದ ಕೆಲಸ ರಾಹುಲ್ ಮಾಡುತ್ತಿದ್ದಾರೆ. ವಿದೇಶದಲ್ಲಿ ಶಿಕ್ಷಣ ಪಡೆದು ಇದೀಗ ವಿದೇಶಗಳಿಗೆ ತೆರಳಿ ಭಾರತವನ್ನು ಮೂದಲಿಸುತ್ತಿರುವ ರಾಹುಲ್ ಗಾಂಧಿ, ಜಗತ್ತಿನಲ್ಲಿಯೇ ಗಮನ ಸೆಳೆಯುತ್ತಿರುವ ಭಾರತದ ಬಗ್ಗೆ ಯಾಕೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತೇಜಸ್ವಿನಿ ಪ್ರಶ್ನೆ ಮಾಡಿದರು.
ಅಭಿವೃದ್ಧಿ ಆಗಿಲ್ಲ ಸರ್ಕಾರ ಏನು ಮಾಡಿಲ್ಲ ಎಂದು ಬೊಬ್ಬೆ ಹೊಡೆಯುವವರು ತಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ೭೦ ವರ್ಷ ಅವಕಾಶ ಇದ್ದರೂ ಏನು ಮಾಡಲು ಸಾಧ್ಯಾವಾಗದವರು ಬೆಂಗಳೂರು-ಮೈಸೂರಿನ ದಶಪಥ ರಸ್ತೆಯ ಬಗ್ಗೆ ಚಕಾರ ಎತ್ತುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಒಂದೆ ಬಿಜೆಪಿ ಸರ್ಕಾರದ ಗುರಿ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಇಡಿ ರಾಜ್ಯಕ್ಕೆ ೧೨೧ ಕೋಟಿ ಹಣ ಬಿಡುಗಡೆ ಮಾಡಿದ್ದರೆ, ಕೊಡಗು ಜಿಲ್ಲೆಗೆ ೧೩೮ ಕೋಟಿ ಪರಿಹಾರ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಪಡಿತರ ಅಕ್ಕಿಯನ್ನು ನಮ್ಮದು ಅನ್ನದೆ ಬೇರೆಯವರು ನೀಡಿದ್ದಾರೆ ಎನ್ನಲು ಸಾಧ್ಯವೇ. ರಾಜ್ಯಕ್ಕೆ ಬಾಂಬ್ ಹಾಕಿದವರು ದೇಶದ್ರೋಹಿಗಳಲ್ಲ ದೇಶಪ್ರೇಮಿಗಳು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳುವಾಗ ಅವರ ಮನಸ್ಥಿತಿ ಯಾವ ರೀತಿ ಇರಬಹುದೆಂದು ನೀವೆ ಊಹಿಸಿಕೊಳ್ಳಿ. ರಾಜ್ಯದಲ್ಲಿ ಈ ಬಾರಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹ ಇಲ್ಲ ಎಂದು ಹೇಳಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ. ಈ ಬಾರಿಯ ಚುನಾವಣೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಅಭಿವೃದ್ಧಿ ಏನಾಗಿದೆ ಎನ್ನುವ ಟೀಕಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದಲ್ಲಿ ಒಂದಲ್ಲ ಒಂದು ರೀತಿಯಿಂದ ಅಭಿವೃದ್ಧಿ ಪಡೆದುಕೊಂಡಿದ್ದಾರೆ. ಬಿಜೆಪಿ ಪಕ್ಷ ಜನರ ವಿಶ್ವಾಸವನ್ನು ಉಳಿಸಿಕೊಂಡಿದೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸವಲತ್ತು ದೊರೆಯುವ ನಿಟ್ಟಿನಲ್ಲಿ ಸರಕಾರ ಯೋಜನೆಗಳನ್ನು ರೂಪಿಸಿ ಜನರಿಗೆ ತಲುಪಿಸಿದೆ. ದೇಶದ ಆಚಾರ, ವಿಚಾರ, ಸಂಸ್ಕೃತಿ ಉಳಿದರೆ ಹಿಂದುತ್ವ ಉಳಿಯುತ್ತದೆ. ದೇಶದಲ್ಲಿ ಅನೇಕ ಉತ್ತಮ ಯೋಜನೆ ರೂಪಿಸಿ ಎಲ್ಲರಿಗೂ ಸವಲತ್ತು ನೀಡಿದರೂ ಮೋದಿ ಏನು ಮಾಡಿದ್ದಾರೆ ಎಂಬ ಅಪಪ್ರಚಾರ ನಡೆಸಲಾಗುತ್ತಿದೆ. ಅಭಿವೃದ್ಧಿ ಮುಖ್ಯ ಗುರಿ. ನಮ್ಮದು ಭರವಸೆ ಮಾತ್ರವಲ್ಲ ನುಡಿದಂತೆ ನಡೆಯುವ ಸರಕಾರ ಎಂದರು.
ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರ ನುಡಿದÀಂತೆ ನಡೆದಿದೆ. ಜನರಿಗೆ ರಾಮಮಂದಿರ ನಿರ್ಮಾಣದ ಬಗ್ಗೆ ಭರವಸೆ ನೀಡಿದಂತೆ ಮಂದಿರ ಕೆಲಸ ನಡೆಯುತ್ತಿದ್ದು ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಕಾಶ್ಮೀರದಲ್ಲಿ ಜನರಿಗೆ ಭಾರತ ದೇಶದವರು ಎನ್ನುವ ಭಾವನೆಯೇ ಇರಲಿಲ್ಲ, ಈಗ ೩೭೦ ನೇ ವಿಧಿಯನ್ನು ಕೇಂದ್ರ ರದ್ದು ಮಾಡಿದ್ದು ಇಂದು ಅಲ್ಲಿ ಜನರಿಗೆ ಆ ರಾಜ್ಯ ಭಾರತದಲ್ಲಿ ಇದೆ ಎಂಬ ಭಾವನೆ ಮೂಡುವಂತಾಗಿದೆ. ಕೆಲವರು ಪ್ರಮುಖ ಸ್ಥಾನ ಗಳಿಸಿ ಕೇಂದ್ರದಿAದ ಅನುದಾನ ಪಡೆದು ಯಾವ ಲೆಕ್ಕ ನೀಡದೆ ನಡೆದುಕೊಳ್ಳುತ್ತಿದ್ದರು. ಇಂದು ಮೋದಿಯ ಉತ್ತಮ ಆಡಳಿತದಿಂದ ಭಾರತ ವಿಶ್ವ ಗುರು ಎನ್ನಿಸಿಕೊಂಡಿದೆ. ನಮ್ಮ ಸರಕಾರ ಅನೇಕ ಜನಪರ ಯೋಜನೆ ರೂಪಿಸಿದ್ದು ಎಲ್ಲಾ ಜನಾಂಗದವರಿಗೆ ಸವಲತ್ತುಗಳನ್ನು ತಲುಪಿಸಲಾಗಿದೆ. ಕೋವಿಡ್ ಕಾಲದಲ್ಲಿ ಕಾಂಗ್ರೆಸ್ ಎಲ್ಲಿತ್ತು, ಜನÀರ ಸಾವು ನೋವಿನಲ್ಲಿ ಭಾಗಿಯಾಗಿ ಜನ ಪರವಾಗಿ ಕೆಲಸ ಮಾಡಿದ್ದು ಬಿಜೆಪಿಯವರು ಮಾತ್ರ. ಅದೇ ರೀತಿ ಕೊಡಗಿನ ಪ್ರಕೃತಿ ವಿಕೋಪ ಸಮಯದಲ್ಲಿ ಸಹ ಯಾವ ಕೆಲಸ ಮಾಡಿಲ್ಲ. ಕೊಡಗಿಗೆ ವೈದ್ಯಕೀಯ ಕಾಲೇಜು ಬಂದ ಕಾರಣ ೨೫೦ ಕ್ಕೂ ಹೆಚ್ಚು ವೈದ್ಯರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶÀವನ್ನು ಮಾಡಲಾಗುತ್ತಿದೆ. ಭಾರತೀಯ ಜನತಾ ಪಕ್ಷ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಹಿಂದುತ್ವ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಮಹಿಳೆ ಸಾಕ್ಷರರಾದರೆ ಇಡಿ ದೇಶವೆ ಸಾಕ್ಷರವಾಗುತ್ತದೆ. ಇದು ಜಾತಿಗಳ ಮಧ್ಯೆ ನಡೆಯುವ ಚುನಾವಣೆ ಅಲ್ಲ. ಪಕ್ಷಗಳ ನಡುವೆ ನಡೆಯುವ ಚುನಾವಣೆಯಾಗಿದೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷೆ ಕವಿತಾ ಬೋಜಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶರೀನ್ ಸುಬ್ಬಯ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭ ಮಹಿಳಾ ಮೋರ್ಚಾದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಸೇರಿದಂತೆ ಪ್ರಮುಖ ಹಿರಿಯ ಮಹಿಳೆಯರಾದ ಜಯಲಕ್ಷಿö್ಮ ಗೋವಿಂದರಾವ್, ಸೋಮೆಯಂಡ ನಂಜಮ್ಮ, ಮಾಚಿಮಂಡ ದೇಚಮ್ಮ, ಕಲ್ಯಾಣಿ, ಅಳಮೇಂಗಡ ದೇವಮ್ಮಾಜಿ, ವಸಂತದೇವಿ ನೇಮಿರಾಜ್, ಪೊಡಮಾಡ ಜಾನಕಿ, ಕಾಕಮಾಡ ಬೋಜಮ್ಮ, ಅಡ್ಡೇಂಗಡ ಕಾವೇರಮ್ಮ, ಲೀಲಾ ಸತೀಶ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಬಿಜೆಪಿ ಪ್ರಮುಖರಾದ ಮಾಪಂಗಡ ಯಮುನಾ ಚಂಗಪ್ಪ, ಮನೆಯಪಂಡ ಕಾಂತಿ ಸತೀಶ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಷಿ÷್ಮ ಸುರೇಶ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಸೇರಿದಂತೆ ಬಿಜೆಪಿ ಪ್ರಮುಖರು, ಮಹಿಳಾ ಮೋರ್ಚಾ ನಾಯಕಿಯರು, ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.
ವರದಿ: ಈಶಾನ್ವಿ