ಸೋಮವಾರಪೇಟೆ, ಮಾ. ೧೬: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪ್ರೀತಿ, ವಿಶ್ವಾಸ, ಪ್ರೇಮ, ಛಲ, ವಿವೇಚನಾ ಶಕ್ತಿಯೊಂದಿಗೆ ಅರ್ಪಣಾ ಮನೋಭಾವವನ್ನು ಅಳವಡಿಸಿ ಕೊಂಡರೆ ಉತ್ತಮ ಸಾಧಕರಾಗ ಬಹುದು ಎಂದು ಕೊಡಗು ವಿವೇಕಾ ನಂದ ಯೂತ್ ಮೂಮೆಂಟ್ನ ಸಂಸ್ಥಾಪಕ ಡಾ. ಕೆ.ಎಂ. ಚಂದ್ರಶೇಖರ್ ಅಭಿಪ್ರಾಯಿಸಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು; ಗುರಿ ತಲುಪಲು ದಿನಂಪ್ರತಿ ಕಲಿತು ಜ್ಞಾನ ಸಂಪಾದಿಸಬೇಕು. ಭಾರತವು ಸ್ವಾತಂತ್ರö್ಯದ ಶತಮಾನೋತ್ಸವ ಆಚರಿಸುವ ಸಂದರ್ಭ ಬಲಿಷ್ಠ ಭಾರತ ಸೋಮವಾರಪೇಟೆ, ಮಾ. ೧೬: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪ್ರೀತಿ, ವಿಶ್ವಾಸ, ಪ್ರೇಮ, ಛಲ, ವಿವೇಚನಾ ಶಕ್ತಿಯೊಂದಿಗೆ ಅರ್ಪಣಾ ಮನೋಭಾವವನ್ನು ಅಳವಡಿಸಿ ಕೊಂಡರೆ ಉತ್ತಮ ಸಾಧಕರಾಗ ಬಹುದು ಎಂದು ಕೊಡಗು ವಿವೇಕಾ ನಂದ ಯೂತ್ ಮೂಮೆಂಟ್ನ ಸಂಸ್ಥಾಪಕ ಡಾ. ಕೆ.ಎಂ. ಚಂದ್ರಶೇಖರ್ ಅಭಿಪ್ರಾಯಿಸಿದರು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು; ಗುರಿ ತಲುಪಲು ದಿನಂಪ್ರತಿ ಕಲಿತು ಜ್ಞಾನ ಸಂಪಾದಿಸಬೇಕು. ಭಾರತವು ಸ್ವಾತಂತ್ರö್ಯದ ಶತಮಾನೋತ್ಸವ ಆಚರಿಸುವ ಸಂದರ್ಭ ಬಲಿಷ್ಠ ಭಾರತ ಪ್ರಶಸ್ತಿ ಪಡೆದ ಹಿಮಾನಿ, ರಾಷ್ಟçಮಟ್ಟದ ಮಾನಕ್ ಇನ್ಸ್ಫಾಯರ್ ಅವಾರ್ಡ್ಗೆ ಆಯ್ಕೆಯಾಗಿರುವ ಅಮೃತ, ಹಿಮಾನಿ, ಜೀವಿತ, ಪಂಚಮಿ, ಆದ್ಯ, ಶೈಕ್ಷಣಿಕ ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಗಳಿಸಿದ ಸಿ.ವಿ. ಅನುಷಾ, ಕ್ರೀಡಾ ಪಟುಗಳಾದ ಕೀರ್ತನ್, ಮಿಥುನ್ ಅವರುಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಹಾಗೂ ಪಠ್ಯೇತರ ವಿಭಾಗದ ಸ್ಪರ್ಧಾ ವಿಜೇತ ವಿದ್ಯಾರ್ಥಿ ಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಭಾತ್ಮೀದಾರರಾದ ಕೆ.ಎಂ. ಜಗದೀಶ್, ಸಂಘದ ಕಾರ್ಯದರ್ಶಿ ಎನ್.ಬಿ. ಗಣಪತಿ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆಯ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್, ಸಂಘದ ಪದಾಧಿಕಾರಿಗಳಾದ ಲಿಂಗರಾಜು, ನಂದಕುಮಾರ್, ಹೆಚ್.ಪಿ. ರಾಜಪ್ಪ, ಕೆ.ಕೆ. ಮಂಜುನಾಥ ಕುಮಾರ್, ಡಿ.ಎಸ್. ಚಂಗಪ್ಪ, ಪ್ರಕಾಶ್ ಕುಮಾರ್, ಸುಮೇದ್, ಶ್ರೀಹರಿ, ಮುಖ್ಯಶಿಕ್ಷಕಿ ಮಿಲ್ಗ್ರೆಡ್ ಗೋನ್ಸಾಲ್ವೆಸ್, ಪಿ.ಯು.ಸಿ. ಪ್ರಾಂಶುಪಾಲ ಪ್ರತಾಪ್ ಇದ್ದರು.
ವಿದ್ಯಾರ್ಥಿನಿಯರಾದ ಸಿರಿ ಸ್ವಾಗತಿಸಿ, ಜೀವಿತಾ, ಬಿಂದು, ಪಂಚಮಿ, ರೇಚನಾ ಕಾರ್ಯಕ್ರಮ ನಿರೂಪಿಸಿದರು. ರಿಶಾ ವಂದಿಸಿದರು. ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.