ಗೋಣಿಕೊಪ್ಪ ವರದಿ, ಮಾ. ೧೬: ಕೊಡವ ಕೂಟಾಳಿಯಡ ಕೂಟದಿಂದ ಮಹಿಳಾ ದಿನಾಚರಣೆ ಅಂಗವಾಗಿ ಆರ್ಜಿ ಗ್ರಾಮದ ಕರ್ತಚ್ಚೀರ ರತ್ತು ಕಾವೇರಮ್ಮ ಅವರನ್ನು ಸನ್ಮಾನಿಸಲಾಯಿತು.

ಸಂಘ ಚಟುವಟಿಕೆ, ವಿವಿಧ ಕ್ಷೇತ್ರಗಳಲ್ಲಿ ಇವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಕೂಟದ ಅಧ್ಯಕ್ಷೆ ಚಿಮ್ಮಚ್ಚೀರ ಪವಿತ ರಜನ್, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಸಲಹೆಗಾರ ಚಂಗುಲAಡ ಸೂರಜ್, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸದಸ್ಯ ಕಾಳಮಂಡ ರಾಬಿನ್ ಅಚ್ಚಮ್ಮ ಇದ್ದರು.