ಗೋಣಿಕೊಪ್ಪ ವರದಿ, ಮಾ. ೧೪: ಸಾಮಾನ್ಯ ರೈತನ ಆದಾಯ ದುಪ್ಪಟ್ಟುಗೊಳಿಸಲು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಕೃಷಿ ತಂತ್ರಜ್ಞಾನವನ್ನು ಗ್ರಾಮೀಣ ಮಟ್ಟಕ್ಕೆ ವಿಸ್ತರಿಸುವ ಯೋಜನೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ನವದೆಹಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಕೃಷಿ ವಿಸ್ತರಣಾ) ಉಪ ಮಹಾ ನಿರ್ದೇಶಕ ಉದಮ್ ಸಿಂಗ್ ಗೌತಮ್ ಹೇಳಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಬೆಂಗಳೂರು ಕೃಷಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಬೆಂಗಳೂರು ಜಿಕೆವಿಕೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಸಾಮಾನ್ಯ ಸೇವಾ ಕೇಂದ್ರದ ಮೂಲಕ ರೈತ ಉತ್ಪಾದಕ ಸಂಸ್ಥೆ ಅಭಿವೃದ್ಧಿಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಮಟ್ಟದಲ್ಲಿ ಕೃಷಿ ತಂತ್ರಜ್ಞಾನವನ್ನು ಮತ್ತಷ್ಟು ವಿಸ್ತರಿಸುವುದು ಕೇಂದ್ರದ ಗುರಿಯಾಗಿದ್ದು, ರೈತ ಉತ್ಪಾದಕ ಸಂಸ್ಥೆ ಮೂಲಕ ಯೋಜನೆ ಮುಂದುವರಿಸಲಾಗುತ್ತಿದೆ. ಸಾಮಾನ್ಯ ಸೇವಾ ಕೇಂದ್ರದ (ಸಿಎಸ್‌ಸಿ) ಮೂಲಕ ಸಾಕಷ್ಟು ಯೋಜನೆಗಳು, ಬಹುತೇಕ ಸರ್ಕಾರದ ಯೋಜನೆಗಳು, ಕೃಷಿ ತಂತ್ರಜ್ಞಾನ ಗ್ರಾಮೀಣ ಜನತೆಗೆ ದೊರೆಯುವಂತಾಗಿದೆ. ಕೃಷಿ ಪ್ರೋತ್ಸಾಹಕ್ಕೆ ಜಾರಿಗೆ ತಂದಿರುವ ಬಹುತೇಕ ಸ್ವಸಹಾಯ ಗುಂಪುಗಳು ಉಳಿದುಕೊಂಡಿಲ್ಲ. ಇದರಿಂದಾಗಿ ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತ ಉತ್ಪಾದಕ ಸಂಸ್ಥೆ ರಚಿಸಿಕೊಂಡು ರೈತನ ಆದಾಯ ದುಪ್ಪಟ್ಟು ಕಾರ್ಯಯೋಜನೆ ಫಲ ನೀಡುತ್ತಿದೆ. ಲಾಭ ಹೆಚ್ಚಿಸಿಕೊಳ್ಳಲು ಪೂರಕ ಪ್ರೋತ್ಸಾಹ ಕೂಡ ನೀಡಲಾಗುತ್ತಿದೆ. ಬೆಳೆದಿರುವ ಬೆಳೆಯನ್ನು ಎಫ್‌ಪಿಒ ಮೂಲಕ ಖರೀದಿಸಿ ಮೌಲ್ಯವರ್ಧನೆಯೊಂದಿಗೆ ಮಾರುಕಟ್ಟೆ ಕಂಡುಕೊಳ್ಳುವುದು ಲಾಭದಾಯಕ ಎಂಬುದು ಅರಿವಾಗಿದೆ. ಈ ದೃಷ್ಠಿಯಲ್ಲಿ ಸಾಮಾನ್ಯ ರೈತನಿಗೂ ಪ್ರೋತ್ಸಾಹ ದೊರೆಯುವಂತಾಗಿದೆ. ಹಸು, ಮೇಕೆ, ಕೋಳಿ ಸಾಕಣೆ, ಅಣಬೆ ಬೇಸಾಯದ ಮೂಲಕ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ. ದೇಶದಲ್ಲಿ ಕೃಷಿ ಅಭಿವೃದ್ಧಿಗೆ ಪೂರಕ ಪ್ರೋತ್ಸಾಹವಿದ್ದು, ನೂತನ ತಂತ್ರಜ್ಞಾನ ಮಾಹಿತಿ ನೀಡುತ್ತಿರುವ ಕೆವಿಕೆ ತಂತ್ರಜ್ಞಾನವು ಬೇರೆ ದೇಶಗಳಿಗೂ ಮಾದರಿಯಗಿದೆ. ದೇಶದಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಸಾಕಷ್ಟು ದೇಶಗಳು ಉತ್ಸುಕತೆ ತೋರಿದೆ ಎಂದು ಅವರು ಹೇಳಿದರು.

ಭಾರತೀಯ ಅನುಸಂಧಾನ ಪರಿಷತ್ (ಕೃಷಿ ವಿಸ್ತರಣಾ) ಸಹಾಯಕ ಮಹಾ ನಿರ್ದೇಶಕ ಡಾ. ರಾಜಶ್ರೀ ರಾಯ್ ಮುರ್ಮನ್ ಮಾತನಾಡಿ, ಸಣ್ಣ ಬೆಳೆಗಾರನ ಆರ್ಥಿಕ ಸುಧಾರಣೆ, ಆದಾಯ ಹೆಚ್ಚಿಸುವುದು, ಇಳುವರಿ ಕಾಪಾಡಿಕೊಳ್ಳುವುದು ಇಂದಿನ ದೊಡ್ಡ ಸವಾಲಾಗಿದ್ದು, ರೈತ ಉತ್ಪಾದಕಾ ಸಂಸ್ಥೆ ಮೂಲಕ ಪ್ರಯೋಜನ ಕಂಡುಕೊಳ್ಳಲು ರೈತರು ಮುಂದೆ ಬರಬೇಕಿದೆ. ಬೇಸಾಯ, ಗುಣಮಟ್ಟದ ಬೆಳೆ ಉತ್ಪಾದನೆ, ತಮ್ಮದೇ ಬ್ರಾö್ಯಂಡ್ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಂಡುಕೊಳ್ಳಲು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕಿದೆ. ೩೦೦ ರೈತರ ತಂಡ ರಚಿಸಿಕೊಂಡು ಕೃಷಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು ಎಂದರು.

ಜಿಎಸ್‌ಐ ಲಿಮಿಟೆಡ್‌ನ ಉಪಾಧ್ಯಕ್ಷ ದೇವೇಂದ್ರ ರುಸ್ತೋಗಿ ಮಾತನಾಡಿ, ಡಿಜಿಟಲ್ ತಂತ್ರಜ್ಞಾನದಿAದ ರೈತನ ಆದಾಯ ದುಪ್ಪಟ್ಟು ಆಗಲು ಪೂರಕವಾಗಿದೆ. ಪ್ರಧಾನಿ ಹಾಗೂ ಕೃಷಿ ಮಂತ್ರಿಗಳ ಚಿಂತನೆಯAತೆ ಸಿಎಸ್‌ಸಿ ಮೂಲಕ ಸಾಕಷ್ಟು ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಗ್ರಾಮ ಮಟ್ಟದಲ್ಲಿ ನವೋದ್ಯಮಿಗಳ ಉದಯಕ್ಕೆ ಕಾರಣವಾಗಿದೆ. ದೇಶದಲ್ಲಿ ಸುಮಾರು ೧೫ ಲಕ್ಷ ಉದ್ಯೋಗ ಸೃಷ್ಠಿಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಹೆಚ್ಚು ಸಂಘಟನಾತ್ಮಕವಾಗಿ ಬೆಳೆದಿರುವುದು ಸರ್ಕಾರದ ಯೋಜನೆ ತಲುಪಿಸಲು ನೆರವಾಗುತ್ತಿದೆ. ಸಾಮಾನ್ಯ ಜನರಿಗೆ ನ್ಯಾನೋ ಯುರಿಯಾ, ನ್ಯಾನೋ ಡಿಎಪಿ ಗೊಬ್ಬರಗಳ ಬಳಕೆ ಬಗ್ಗೆ ಜಾಗೃತಿ, ಸಿರಿಧಾನ್ಯಗಳ ಉತ್ಪಾದನೆ, ವಿನೂತನ ತಂತ್ರಜ್ಞಾನ ಮಾಹಿತಿ ದೊರೆಯುವಂತಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಭಾಗವಹಿಸಿದ್ದರು. ಪುತ್ತರಿ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕಿ ಸುನಿತಾ ಅಪ್ಪಣ್ಣ, ಸಿಇಓ ಹೊಟ್ಟೇಂಗಡ ಪೊನ್ನಣ್ಣ ಅವರನ್ನು ಎಫ್‌ಪಿಓ ನಿರ್ವಹಣೆ ಹಿನ್ನೆಲೆ ಅಭಿನಂದಿಸಲಾಯಿತು.

ಕೃಷಿ ತಂತ್ರಜ್ಞಾನ ಅಳವಡಿಕಾ ಸಂಶೋಧನಾ ಸಂಸ್ಥೆಯ ವಲಯ ೧೧ ರ ನಿರ್ದೇಶಕ ಡಾ. ವೆಂಕಟಸುಬ್ರಮಣಿಯನ್, ಕೆವಿಕೆ ನೋಡೆಲ್ ಅಧಿಕಾರಿ ಡಾ. ಮಲ್ಲಿಕಾರ್ಜುನ್ ಹಂಜಿ, ಕೆವಿಕೆ ಪ್ರಬಾರ ಮುಖ್ಯಸ್ಥ ಡಾ. ಕಾಡ್ಯಮಾಡ ಎ. ದೇವಯ್ಯ ಇದ್ದರು.