ಕೂಡಿಗೆ, ಮಾ. ೧೪: ಕೊಡಗಿನ ಗಡಿ ಭಾಗವಾದ ಶಿರಂಗಾಲ ಗ್ರಾಮದಲ್ಲಿರುವ ಚೋಳರ ಕಾಲದ ಶ್ರೀ ಉಮಾಮಹೇಶ್ವರ ಸ್ವಾಮಿ ದೇವರ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಹೋಮ ಹವನಗಳು ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು. ನಂತರ ಮಧ್ಯಾಹ್ನ ೧ ಗಂಟೆಗೆ ದೇವಾಲಯದಿಂದ ಶ್ರೀ ಉಮಾಮಹೇಶ್ವರ ಸ್ವಾಮಿಯ ಮೂರ್ತಿಯನ್ನು ದೇವಾಲಯದಿಂದ ತಂದು ಭವ್ಯವಾದ ರಥದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಮೆರವಣಿಗೆ ನಡೆಯಿತು.
ಸಾವಿರಾರು ಭಕ್ತರಿಗೆ ಬೆಂಗಳೂರಿನ ಡಿ.ವಿ. ರಾಜಶೆಟ್ಟಿಯವರ ಜ್ಞಾಪಕಾರ್ಥ ವಾಗಿ ಚಂದ್ರಿಕಾ, ಮತ್ತು ಕೃಷ್ಣ ಶೆಟ್ಟಿ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು.
ಈ ಸಂದರ್ಭ ಗ್ರಾಮ ದೇವತಾ ಸಮಿತಿಯ ರುದ್ರಪ್ಪ, ಕಾರ್ಯದರ್ಶಿ ಮಹೇಶ್, ಮಂಟಿಗಮ್ಮ ಹಣಕಾಸು ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ಇಂಜಿನಿಯರ್ ಆರ್.ಆರ್. ಕುಮಾರ್, ಎಸ್.ಎಸ್. ಶ್ರೀನಿವಾಸ್, ಬಸವಣ್ಣಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್. ರಮೇಶ್, ಎಸ್.ಕೆ. ಪ್ರಸನ್ನ, ಎಸ್.ಕೆ. ಧನೆಂದ್ರಕುಮಾರ್, ಡಿ.ಎ. ಲೋಕೇಶ್, ಎಸ್. ಪಿ. ಚೇತನ್ ಸೇರಿದಂತೆ ದೇವಾಲಯ ಸಮಿತಿಯ ನಿರ್ದೇಶಕರು, ಪದಾಧಿಕಾರಿಗಳು ಹಾಜರಿದ್ದರು.