ಸೋಮವಾರಪೇಟೆ, ಮಾ. ೧೩: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಯುವ ಮೋರ್ಚಾ ವತಿಯಿಂದ ಸೋಮವಾರಪೇಟೆಯಲ್ಲಿ ಯುವ ಶಕ್ತಿ ಸಂಗಮ-ಬೃಹತ್ ಬೈಕ್ ರ್ಯಾಲಿ ಕಾರ್ಯಕ್ರಮ ನಡೆಯಿತು. ಪಟ್ಟಣವನ್ನು ಪ್ರವೇಶಿಸುವ ಮೂರು ಕಡೆಗಳಿಂದ ಆಗಮಿಸಿದ ನೂರಾರು ಬೈಕ್ಗಳು ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಾಗಿದವು. ನಂತರ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಬೃಹತ್ ಸಮಾವೇಶ ನಡೆಯಿತು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರುಗಳು ಬೈಕ್ ಜಾಥಾದಲ್ಲಿ ಭಾಗಿಯಾಗಿದ್ದರು. ಮಡಿಕೇರಿ, ಕುಶಾಲನಗರ ಭಾಗದಿಂದ ಆಗಮಿಸಿದ ಬೈಕ್ಗಳು ಇಲ್ಲಿನ ಕಕ್ಕೆಹೊಳೆ ಜಂಕ್ಷನ್ನಲ್ಲಿ ಸೇರಿ ಅಲ್ಲಿಂದ ಪಟ್ಟಣಕ್ಕೆ ಆಗಮಿಸಿದವು. ಬಾಣಾವರ ರಸ್ತೆಯಿಂದ ಆಗಮಿಸಿದ ಬೈಕ್ಗಳು ಅಂಬೇಡ್ಕರ್ ಸರ್ಕಲ್ ಬಳಿ, ಶನಿವಾರಸಂತೆ ಮಾರ್ಗದಿಂದ ಬಂದ ಬೈಕ್ಗಳು ಜೂನಿಯರ್ ಕಾಲೇಜು ಬಳಿ ಸೇರಿ ಅಲ್ಲಿಂದ ಪಟ್ಟಣಕ್ಕೆ ಪ್ರವೇಶಿಸಿದವು.
ಪಟ್ಟಣದ ಸಿ.ಕೆ ಸುಬ್ಬಯ್ಯ ರಸ್ತೆ, ಪುಟ್ಟಪ್ಪ ವೃತ್ತದ ಮಾರ್ಗವಾಗಿ ಮಡಿಕೇರಿ ರಸ್ತೆ, ದೇವಾಲಯ ರಸ್ತೆ, ಕ್ಲಬ್ರಸ್ತೆ, ವಿವೇಕಾನಂದ ವೃತ್ತ, ಶಾಂತಳ್ಳಿ ರಸ್ತೆಯ ಮಾರ್ಗವಾಗಿ ಸಾಗಿ ಒಕ್ಕಲಿಗರ ಸಮುದಾಯ ಭವನಕ್ಕೆ ತೆರಳಿದವು. ಬೈಕ್ ರ್ಯಾಲಿಯಲ್ಲಿ ಯುವಕ-ಯುವತಿಯರು, ಪುರುಷರೊಂದಿಗೆ ಮಹಿಳೆಯರೂ ಭಾಗಿಯಾಗಿದ್ದರು.ರ್ಯಾಲಿಯಲ್ಲಿ ಭಾರತ್ ಮಾತಾ ಕೀ ಜೈ, ಪ್ರಧಾನಿ ನರೇಂದ್ರ ಮೋದಿ ಕೀ ಜೈ ಸೇರಿದಂತೆ ಸ್ಥಳೀಯ ಶಾಸಕರುಗಳಿಗೆ ಜೈಕಾರ ಹಾಕುತ್ತಾ ಕಾರ್ಯಕರ್ತರು ಸಾಗಿದರು. ಕೇಸರಿ ಹಾಗೂ ಬಿಜೆಪಿ ಬಾವುಟಗಳನ್ನು ಹಿಡಿದು ಉತ್ಸಾಹದಿಂದ ರ್ಯಾಲಿಯಲ್ಲಿ ಭಾಗಿಯಾಗಿದ್ದರು.
ಈರ್ವರನ್ನೂ ಮತ್ತೊಮ್ಮೆ ಗೆಲ್ಲಿಸಿ
ಸೇವೆ, ಸಮರ್ಪಣೆ ಮತ್ತು ರಾಷ್ಟಾçಭಿಮಾನ ಮೂಡಿಸುವ ಪಕ್ಷ ಬಿಜೆಪಿಯಾಗಿದೆ. ದೇಶದ ಅಸ್ಮಿತೆ, ಸಂಸ್ಕೃತಿಯನ್ನು ಉಳಿಸಿಕೊಂಡು ಅಭಿವೃದ್ಧಿಗೆ ವೇಗ ನೀಡುವ ಕೆಲಸವನ್ನು ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡಿದೆ. ಬಿಜೆಪಿ ಸರ್ಕಾರಗಳ ಜನಪರ ಯೋಜನೆ ಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಕೊಡಗಿನ ಈರ್ವರು ಶಾಸಕರನ್ನು ಮತ್ತೊಮ್ಮೆ ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿ ಕಳುಹಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ
(ಮೊದಲ ಪುಟದಿಂದ) ರಾಜ್ಯಾಧ್ಯಕ್ಷ ಡಾ. ಸಂದೀಪ್ಕುಮಾರ್ ಕರೆ ನೀಡಿದರು.
ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಯುವ ಶಕ್ತಿ ಸಂಗಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ನಾಯಕತ್ವದಲ್ಲಿ ಭಾರತ ಬಲಿಷ್ಠವಾಗುತ್ತಿದೆ. ದೇಶದ ಎಲ್ಲಾ ಸ್ತರದ ಜನರ ಆಶೋತ್ತರಗಳಿಗೆ ಮೋದಿ ಸ್ಪಂದಿಸುತ್ತಿದ್ದಾರೆ. ಆಯುಷ್ಮಾನ್, ಉಜ್ವಲ, ಜನೌಷಧ್, ಮುದ್ರಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ನೂರಾರು ವಿನೂತನ ಯೋಜನೆಗಳು ಜನರಿಗೆ ಹತ್ತಿರವಾಗಿವೆ ಎಂದು ಸಂದೀಪ್ಕುಮಾರ್ ಅಭಿಪ್ರಾಯಿಸಿದರು.
ಕುಂಕುಮ ಕಂಡರೆ ಭಯ ಪಡುವ, ಕೇಸರಿ ಕಂಡರೆ ಅಲರ್ಜಿಯಂತಾಡುವ, ಟಿಪ್ಪುವಿನ ಬಗ್ಗೆ ಮಾತ್ರ ಪ್ರೇಮ ತೋರುವ ರಾಜಕಾರಣಿಗಳನ್ನು ದೂರವಿಟ್ಟು, ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ಸರ್ವವ್ಯಾಪಿ-ಸರ್ವಸ್ಪರ್ಶಿ ಬಿಜೆಪಿ: ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಭಾರತೀಯ ಜನತಾ ಪಾರ್ಟಿಯ ಸರ್ಕಾರ ಸಮಾಜದ ಎಲ್ಲಾ ವರ್ಗದ ಮಂದಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಿದ್ದು, ಸರ್ವ ವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗಿ ಆಡಳಿತ ನಡೆಸುತ್ತಿದೆ ಎಂದರು.
ಅಪ್ಪಚ್ಚುರAಜನ್ ೨೫ ವರ್ಷ ಶಾಸಕರಾಗಿದ್ದು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಕಾಂಗ್ರೆಸ್ನವರು ಪ್ರಶ್ನಿಸುತ್ತಿದ್ದಾರೆ. ಚಿಕ್ಕಅಳುವಾರದಲ್ಲಿ ವಿಶ್ವವಿದ್ಯಾನಿಲಯ, ಕುಶಾಲನಗರದಲ್ಲಿ ಇಂಜಿನಿಯರಿAಗ್ ಕಾಲೇಜು, ಕೂಡಿಗೆಯಲ್ಲಿ ಸೈನಿಕ ಶಾಲೆ, ಮಡಿಕೇರಿಯಲ್ಲಿ ಮೆಡಿಕಲ್ ಕಾಲೇಜು, ಸೋಮವಾರಪೇಟೆಯಲ್ಲಿ ಅಂಬೇಡ್ಕರ್ ವಸತಿ ನಿಲಯ ಸ್ಥಾಪಿಸಿಲ್ಲವೇ? ಮೂಲಭೂತ ಸೌಕರ್ಯಗಳೊಂದಿಗೆ ಸಾರಿಗೆ, ಶೈಕ್ಷಣಿಕ, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಾಗಿಲ್ಲವೇ? ಎಂದ ಶಾಸಕ ರಂಜನ್, ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭ ಕೊಡಗಿನಲ್ಲಿ ಆರೇಳು ಮಂದಿ ನಾಯಕರು ಮಂತ್ರಿಗಳಾಗಿದ್ದರು? ಅವರುಗಳೆಲ್ಲಾ ಯಾಕೆ ಇಂತಹ ಅಭಿವೃದ್ಧಿ ಕಾರ್ಯ ಮಾಡಿಲ್ಲ? ಎಂದು ಮರುಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನರೇಂದ್ರ ಮೋದಿ ಅವರು ದೇಶದ ಎಲ್ಲ ಜನರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ನುಡಿದಂತೆ ನಡೆಯುವ ಸರ್ಕಾರ ಬಿಜೆಪಿ. ಈಗಾಗಲೇ ರಾಮಮಂದಿರ ನಿರ್ಮಾಣ, ಆರ್ಟಿಕಲ್ ೩೭೦ ರದ್ದು ಮಾಡಲಾಗಿದೆ. ಇದರೊಂದಿಗೆ ರೈತ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರ ಹಣ ವರ್ಗಾವಣೆ, ಉಜ್ವಲ ಯೋಜನೆಯಡಿ ಪ್ರತಿ ಮನೆಗೂ ಉಚಿತ ಗ್ಯಾಸ್ ವಿತರಣೆ ಸೇರಿದಂತೆ ಎಲ್ಲಾ ವರ್ಗದ ಮಂದಿಗೆ ಮೋದಿ ನೇತೃತ್ವದ ಕೇಂದ್ರ ಹಾಗೂ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಗಳು ಯೋಜನೆ ತಲುಪಿಸಿವೆ ಎಂದರು.
ಎಸ್ಸಿ ಎಸ್ಟಿ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಆಗಿ ಕಾಂಗ್ರೆಸ್ ಬಳಸಿಕೊಂಡಿದೆ. ಆದರೆ ಬಿಜೆಪಿ ಸರ್ಕಾರ ಅವರುಗಳ ಮೀಸಲಾತಿಯನ್ನು ಹೆಚ್ಚಿಸಿ, ಬಜೆಟ್ನಲ್ಲಿ ೨೪ ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ. ಆ ಮೂಲಕ ಸರ್ವ ಸ್ಪರ್ಶಿ-ಸರ್ವ ವ್ಯಾಪಿ ಸರ್ಕಾರವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಅಭಿಪ್ರಾಯಿಸಿದರು.
ಕೊಡಗಿಗೆ ೪ ಸಾವಿರ ಕೋಟಿ: ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಕೊಡಗು ಜಿಲ್ಲೆಗೆ ೪ ಸಾವಿರ ಕೋಟಿಯಷ್ಟು ಅನುದಾನ ತರಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಹೊಸ ಆಯಾಮ ನೀಡಲಾಗಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಪ್ರಾಕೃತಿಕ ವಿಕೋಪ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಬಿಜೆಪಿ ಸರ್ಕಾರ ಕೊಡಗಿಗೆ ಅನುದಾನ ನೀಡಿದೆ. ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ. ಸೋಮವಾರಪೇಟೆ ಮೂಲಕ ಹಾದು ಹೋಗುವ ಬೆಂಗಳೂರು - ಜಾಲ್ಸೂರು ರಸ್ತೆಗೆ ೧೦ ಕೋಟಿ, ಕಣಿವೆ-ಮಸಗೋಡು ರಸ್ತೆಗೆ ೫ ಕೋಟಿ ಅನುದಾನ ಬಿಡುಗಡೆಯಾಗಿದೆ. ಜನತೆಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಎಂದರು.
ಯುವ ಶಕ್ತಿ ದೇಶದ ಶಕ್ತಿಯಾಗಿದೆ. ಯುವಕರು ಶೇ.೪೫ರಷ್ಟಿದ್ದು, ದೇಶದ ಭವಿಷ್ಯವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ತೊಡಗಬೇಕಿದೆ. ಹೆಚ್ಚಿನ ಯುವಜನಾಂಗ ಬಿಜೆಪಿಯ ಬೆಂಬಲಿಗರಾಗಿರುವುದು ಹೆಮ್ಮೆಯ ವಿಷಯ ಎಂದು ಬೋಪಯ್ಯ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಹೆಚ್.ಕೆ. ಮಾದಪ್ಪ, ವಿ.ಕೆ. ಲೋಕೇಶ್, ಜೈಶಂಕರ್, ಮಹೇಶ್ ತಿಮ್ಮಯ್ಯ, ರೂಪಾ ಸತೀಶ್, ನವೀನ್ ಪೂಜಾರಿ, ಚಂದ್ರಶೇಖರ್ ಹೇರೂರು, ಹೇಮಂತ್ ತೋರೇರ, ಭರತ್ ಕಾರ್ಯಪ್ಪ, ಎಸ್.ಸಿ. ಸತೀಶ್, ವಿ.ಎಂ. ವಿಜಯ, ಪಿ.ಕೆ. ಚಂದ್ರು ಸೇರಿದಂತೆ ಇತರರು ಉಪಸ್ಥಿತರಿದ್ದರು.