ಮಡಿಕೇರಿ, ಮಾ. ೧೩: ದ.ಕೊಡಗಿನ ಗೋಣಿಕೊಪ್ಪ ಹಾಗೂ ಕದನೂರು ಗ್ರಾಮದ ನಿವಾಸಿಗಳಾದ ಹಿರಿಯ ಸಹೋದರರುಗಳಾದ ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಪಾಲೇಕಂಡ ಬೋಪಯ್ಯ ಅವರುಗಳು ಆಸ್ಟೆçÃಲಿಯಾದಲ್ಲಿ ನಡೆದ ಅಂತರರಾಷ್ಟಿçÃಯ ಮಟ್ಟದ ಮಾಸ್ಟರ್ಸ್ ಗೇಮ್ಸ್ನಲ್ಲಿ ಸಾಧನೆ ಮಾಡಿದ್ದಾರೆ.
ಭಾರತದಲ್ಲಿ ನಡೆದ ಮಾಸ್ಟರ್ಸ್ ಗೇಮ್ಸ್ನಲ್ಲಿ ಅತ್ಯುತ್ತಮ ಸಾಧನೆಗೈದು ಆಸ್ಟೆçÃಲಿಯಾದಲ್ಲಿ ನಡೆಯುತ್ತಿರುವ ಅಂತರರಾಷ್ಟಿçÃಯ ಕ್ರೀಡಾಕೂಟಕ್ಕೆ ಆಯ್ಕೆಯಾದ ೮೬ ಹಾಗೂ ೯೫ ವಯಸ್ಸಿನ ಸಹೋದರರು ಕುಟುಂಬದ ಸದಸ್ಯರ ಧನಸಹಾಯದಿಂದಲೇ ವಿದೇಶಕ್ಕೆ ತೆರಳಿ ತಲಾ ಎರಡರಂತೆ ೪ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೋಪಯ್ಯ ಅವರು ೯೦+ ವಿಭಾಗದಲ್ಲಿ ಭಾಗವಹಿಸಿ ೧೦೦ ಮೀಟರ್ ಓಟದಲ್ಲಿ ಚಿನ್ನ ಹಾಗೂ ಜ್ಯಾವಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದರೆ, ಬೆಳ್ಯಪ್ಪ ಅವರು ೭೫+ ವಿಭಾಗದಲ್ಲಿ ೧೫೦೦ ಮೀಟರ್ ವೇಗದ ನಡಿಗೆಯಲ್ಲಿ ಚಿನ್ನ ಹಾಗೂ ೧೦೦ ಮೀಟರ್ ಓಟದಲ್ಲಿ ಕಂಚು ಪಡೆದುಕೊಂಡಿದ್ದಾರೆ.