ಮಡಿಕೇರಿ, ಮಾ. ೧೩: ಐಕೊಳ ಗ್ರಾಮದ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಉತ್ಸವವು ತಾ. ೧೪, ೧೫, ೧೬ ಮತ್ತು ೧೭ ರಂದು ನಡೆಯಲಿದ್ದು, ತಾ. ೧೪ ರಂದು ತಕ್ಕರ ಐನ್‌ಮನೆಯಿಂದ ಭಂಡಾರ ತರುವುದು. ಸಂಜೆ ೭ ಗಂಟೆಗೆ ಅಂದಿ ಬೆಳಕು, ತಾ. ೧೫ ರಂದು ನೆರ್ಪು ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ತಾ. ೧೬ ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವುದು, ೧೨ ಗಂಟೆಗೆ ಮಹಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಂತರ ದೇವರ ಜಳಕ, ದೇವರ ನೃತ್ಯ ಮತ್ತು ತಾ.೧೭ ರಂದು ಸಂಜೆ ೭ಗಂಟೆಗೆ ಶ್ರೀ ಅಯ್ಯಪ್ಪ ಮತ್ತು ಚಾಮುಂಡಿ ದೇವರ ತೆರೆ ನಡೆಯಲಿದೆ ಎಂದು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.