ಮಡಿಕೇರಿ, ಮಾ. ೧೪: ಜಿಲ್ಲೆಯ ಪ್ರಮುಖ ದೇವಸ್ಥಾನ ಶ್ರೀ ಪಾಡಿ ಇಗ್ಗುತಪ್ಪ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಕಕ್ಕಬೆ ಜಂಕ್ಷನ್‌ನಲ್ಲಿ ನಿರ್ಮಿಸಲಾಗಿರುವ ನೂತನ ಮಹಾದ್ವಾರದ ಉದ್ಘಾಟನೆ ತಾ. ೧೩ ರಂದು ನಡೆಯಿತು. ಬೆಂಗಳೂರಿನ ದಾನಿಗಳಿಬ್ಬರ ಸಹಕಾರದೊಂದಿಗೆ ಭಕ್ತಜನಸಂಘದ ಮೂಲಕ ಆಕರ್ಷಕ ರೀತಿಯ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಪಾಡಿಶ್ರೀ ಇಗ್ಗುತಪ್ಪ ಭಕ್ತಜನ ಸಂಘದ ಅಧ್ಯಕ್ಷರಾದ ಕಾಂಡAಡ ಬಿ. ಜೋಯಪ್ಪ ಅವರು ದ್ವಾರವನ್ನು ಉದ್ಘಾಟಿಸಿದರು.

ಸಂಘದ ಉಪಾಧ್ಯಕ್ಷರಾದ ಪರದಂಡ ಡಾಲಿ, ಗೌರವ ಕಾರ್ಯದರ್ಶಿ ಬೊಳಂದAಡ ಲಲಿತ ನಂದಕುಮಾರ್, ಖಜಾಂಚಿ ನಂಬಡಮಾಡ ಸುಬ್ರಮಣಿ, ನಿರ್ದೇಶಕರಾದ ಕಲಿಯಂಡ ಹ್ಯಾರಿ ಮಂದಣ್ಣ, ಕೋಡಿಮಣಿಯಂಡ ಸುರೇಶ್, ಬಡಕಡ ಸುರೇಶ್, ಕಲಿಯಂಡ ಸುನಂದ, ಪಾಂಡAಡ ನರೇಶ್, ಉದಿಯಾಂಡ ಸುರ ನಾಣಯ್ಯ, ಪಾರುಪತ್ತೆಗಾರರಾದ ಪರದಂಡ ಪ್ರಿನ್ಸ್ ತಮ್ಮಪ್ಪ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಉದಿಯಂಡ ಸುಭಾಷ್, ಬೊಳಂದAಡ ನಂದಕುಮಾರ್, ಕೋಡಿಮಣಿಯಂಡ ಬೋಪಯ್ಯ, ಕಲಿಯಂಡ ಚಿಟ್ಟಿಯಪ್ಪ, ಪರದಂಡ ಸುಬ್ರಮಣಿ, ಕಾರ್ಯನಿರ್ವಾಹಕ ಕಂಬೇಯAಡ ಬೆಳ್ಯಪ್ಪ, ಕಂಬೇಯAಡ ಗಣೇಶ್, ಊರಿನವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.