ಕುಶಾಲನಗರ, ಮಾ.೧೪: ನೆರೆಮನೆಯ ಕಟ್ಟಡ ನಿರ್ಮಾಣಕ್ಕೆ ಸಂಬAಧಿಸಿದAತೆ ಎರಡು ಮನೆಗಳ ಮಾಲೀಕರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಮಹಿಳೆಯೊಬ್ಬರು ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಘಟನೆಗೆ ಸಂಬAಧಿಸಿದAತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ. ಪಟ್ಟಣದ ಪಟೇಲ್ ಬಡಾವಣೆಯಲ್ಲಿ ಘಟನೆ ನಡೆದಿದ್ದು ಸ್ಥಳೀಯ ನಿವಾಸಿ ಬಿ.ಎನ್. ಸಂತೋಷ್ಕುಮಾರ್ ಎಂಬವರು ಪಕ್ಕದ ನಿವಾಸಿ ಸುಮಿತ್ರ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ. ಇನ್ನೊಂದೆಡೆ ಸಂತೋಷ್ ಕುಮಾರ್ ಅವರು ದೂರು ನೀಡಿದ್ದು ತಮ್ಮ ಮೇಲೆ ಸುಮಿತ್ರ ಮತ್ತು ಎದುರು ಮನೆಯ ಅಜಿತ ಮತ್ತು ಅವರ ಪತಿ ಧನರಾಜ್ ಎಂಬವರುಗಳು ಹಲ್ಲೆ ನಡೆಸಿರುವುದಾಗಿ ಪ್ರತಿ ದೂರು ದಾಖಲಿಸಿದ್ದಾರೆ.
ಕಳೆದ ಹಲವು ಸಮಯಗಳಿಂದ ಎರಡು ಮನೆಯವರ ನಡುವೆ ಕಟ್ಟಡ ನಿರ್ಮಾಣಕ್ಕೆ ಸಂಬAಧಿಸಿದAತೆ ಸ್ಥಳೀಯ ಪಂಚಾಯಿತಿಗೆ ದೂರುಗಳು ಬಂದಿದ್ದು ಯಾವುದೇ ಸ್ಪಂದನೆ ದೊರೆಯದೆ ಈ ವಿಷಯ ವಿಕೋಪಕ್ಕೆ ತಿರುಗಿ ಸಂತೋಷ್ ಮತ್ತು ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಕೈ ಕೈ ಮಿಲಾಯಿಸಿ ಎದುರು ಮನೆಯ ಧನುರಾಜ್ ಕುಟುಂಬ ಸದಸ್ಯರು ಜಗಳ ಬಿಡಿಸಲು ತೆರಳಿದ್ದಾರೆ. ಮಹಿಳೆ ಸುಮಿತ್ರ ಅವರು ತೀವ್ರ ಗಾಯಗೊಂಡು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಬಳಿಕ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಶಾಲನಗರ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕುಶಾಲನಗರ ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್ ಸಹಾಯಕ ಪೊಲೀಸ್ ಅಧಿಕಾರಿ ಗೋಪಾಲ್ ಭೇಟಿ ನೀಡಿ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಸಂಗ್ರಹಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದ ಸಂತೋಷ್ ಕುಮಾರ್ ಅವರು ವಕೀಲ ವೃತ್ತಿಯಲ್ಲಿದ್ದು ಕುಶಾಲನಗರ ವಕೀಲರ ಸಂಘ ಘಟನೆಯನ್ನು ಖಂಡಿಸಿ ಸೋಮವಾರ ಕುಶಾಲನಗರ ನ್ಯಾಯಾಲಯದ ಕಲಾಪಗಳಿಗೆ ಗೈರು ಹಾಜರಾಗಿದ್ದರು. ಮಹಿಳೆಯ ಮೇಲೆ ದೌರ್ಜನ್ಯ ಖಂಡಿಸಿರುವ ಸ್ತಿçà ಶಕ್ತಿ ಸಂಘಟನೆಯ ಪ್ರಮುಖರಾದ ಫಿಲೋಮಿನಾ ಅವರು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಮಹಿಳೆಗೆ ನ್ಯಾಯ ಒದಗಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.