ಸಿದ್ದಾಪುರ, ಮಾ. ೧೪: ಕೆರೆಗೆ ಕಾಲು ಜಾರಿ ಬಿದ್ದ ಕಾರ್ಮಿಕ ನೋರ್ವ ಸಾವನ್ನಪ್ಪಿರುವ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ.
ಗುಡ್ಡೆಹೊಸೂರು ಸಮೀಪವಿರುವ ಬಸವನಹಳ್ಳಿಯ ನಿವಾಸಿಯಾಗಿರುವ ಮಂಜು (೨೮) ಎಂಬಾತ ತನ್ನ ಸಂಬAಧಿಕರ ಮನೆಗೆ ಆಗಮಿಸಿ ಕಾಫಿ ತೋಟದಲ್ಲಿ ಹಬ್ಬಕ್ಕೆಂದು ಬಂದಿದ್ದು, ಈತ ಖಾಸಗಿ ಸಂಸ್ಥೆಗೆ ಸೇರಿದ ಕಾಫಿ ತೋಟದ ಪಾಲಿಬೆಟ್ಟದ ಮಟ್ಟಪರಂಬು ಎಂಬಲ್ಲಿ ಕೆರೆಗೆ ಸ್ನಾನಕ್ಕೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ.
ಈ ಬಗ್ಗೆ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿದ್ದಾಪುರ ಠಾಣಾಧಿಕಾರಿ ದಿಲೀಪ್ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೃತದೇಹವನ್ನು ಹೊರ ತೆಗೆಯಲು ಗೋಣಿಕೊಪ್ಪಲು ವಿನಿಂದ ಅಗ್ನಿಶಾಮಕದಳದವರು ಆಗಮಿಸಿ ಪ್ರಯತ್ನಪಟ್ಟರು. ಆದರೆ ಮೃತದೇಹವು ಲಭಿಸಿರುವುದಿಲ್ಲ. ಕತ್ತಲೆ ಆವರಿಸಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರು ಹುಡುಕಾಟವನ್ನು ಸ್ಥಗಿತಗೊಳಿಸಿದರು.
ತಾ. ೧೫ ರಂದು (ಇಂದು) ಮತ್ತೆ ಕೆರೆಯಲ್ಲಿ ಮೃತದೇಹದ ಹುಡುಕಾಟ ನಡೆಯಲಿದೆ. ಮೃತ ಮಂಜು ಅವಿವಾಹಿತನಾಗಿದ್ದಾನೆ. ಈತ ಬಸವನಹಳ್ಳಿಯಲ್ಲಿ ದಿಡ್ಡಳ್ಳಿ ಆದಿವಾಸಿಗಳಿಗೆ ನಿರ್ಮಿಸಿದ್ದ ಪುನರ್ವಸತಿ ಕೇಂದ್ರದಲ್ಲಿ ವಾಸ ಮಾಡಿಕೊಂಡಿದ್ದ.