ಸೋಮವಾರಪೇಟೆ, ಮಾ. ೧೩: ಕ್ಷÄಲ್ಲಕ ವಿಚಾರಕ್ಕೆ ಮನೆಯಲ್ಲಿ ಏರ್ಪಟ್ಟ ಜಗಳ ಮಾವನ ಹತ್ಯೆಯೊಂದಿಗೆ ಅಂತ್ಯಗೊAಡ ಘಟನೆ ಸಮೀಪದ ಕಿಕ್ಕರಳ್ಳಿ ಗ್ರಾಮದಲ್ಲಿ ನಡೆದಿದೆ.
ಸೊಸೆಯ ಕೋಪಕ್ಕೆ ತುತ್ತಾದ ಮಾವ, ತನ್ನ ಮನೆಯಲ್ಲಿಯೇ ದಾರುಣವಾಗಿ ಹತ್ಯೆಯಾಗಿದ್ದು, ಆರೋಪಿ ಸೊಸೆಯನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಕಿಕ್ಕರಳ್ಳಿ ಗ್ರಾಮದ ಕೆ.ಎ. ಮಂದಣ್ಣ (೭೩) ಎಂಬವರೇ ಸೊಸೆಯಿಂದ ಹತ್ಯೆಗೀಡಾಗಿದ್ದು, ಆರೋಪಿ ಸೊಸೆ ನೀಲಮ್ಮ ಅಲಿಯಾಸ್ ಜ್ಯೋತಿ (೨೫) ಎಂಬಾಕೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಮಂದಣ್ಣ ಅವರ ಪುತ್ರ ಕೆ.ಎಂ. ನಾಣಯ್ಯ, ಚಾಮೇರಮನೆ ಗ್ರಾಮದ ಜ್ಯೋತಿಯನ್ನು ವಿವಾಹವಾಗಿದ್ದು, ೩ ವರ್ಷ ಪ್ರಾಯದ ಪುತ್ರನಿದ್ದಾನೆ. ಕಳೆದ ಮೂರು ವರ್ಷಗಳಿಂದ ಮಾವ ಮತ್ತು ಸೊಸೆಯ ನಡುವೆ ಆಗಾಗ್ಗೆ ಜಗಳ ನಡೆಯು ತ್ತಿದ್ದು, ಒಂದು ವರ್ಷದಿಂದ ಮನೆಯೊಳಗಿನ ಪ್ರತ್ಯೇಕ ಕೊಠಡಿ ಯಲ್ಲಿ ಮಂದಣ್ಣ ವಾಸವಿದ್ದು, ಪ್ರತ್ಯೇಕ ವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರು.
ಕಳೆದ ತಾ. ೧೧ರಂದು ರಾತ್ರಿ ಮಂದಣ್ಣ ಅವರು ಮೊಮ್ಮಗನಿಗೆ ಹಣ್ಣು ನೀಡಿದ ವಿಚಾರಕ್ಕೆ ಸಂಬAಧಿಸಿದAತೆ ಈರ್ವರ ನಡುವೆ ಮತ್ತೆ ಜಗಳ ಏರ್ಪಟ್ಟಿದ್ದು, ಇದು ತಾ. ೧೨ರಂದು ಮುಂದುವರೆದಿದೆ. ನಾಣಯ್ಯ ಅವರು ನಿನ್ನೆ ದಿನ ಸೌದೆ ಕೆಲಸಕ್ಕಾಗಿ ತೋಟಕ್ಕೆ ತೆರಳಿದ ಸಂದರ್ಭ ಮಾವ-ಸೊಸೆಯ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದ್ದು, ಸಂಜೆ ವೇಳೆಗೆ ಮನೆಯೊಳಗೆ ಇದ್ದ ಕೋವಿಯಿಂದ ಸೊಸೆ ಜ್ಯೋತಿ ತನ್ನ ಮಾವನ ಮೇಲೆ ಗುಂಡು ಹಾರಿಸಿದ್ದಾಳೆ.
(ಮೊದಲ ಪುಟದಿಂದ)
ಪರಿಣಾಮ ಬೆನ್ನಿನ ಭಾಗಕ್ಕೆ ಗುಂಡು ಹೊಕ್ಕಿದ್ದು, ಮಂದಣ್ಣ ಅವರು ತಾವು ವಾಸವಿದ್ದ ಕೊಠಡಿಯೊಳಗೆ ಅಸುನೀಗಿದ್ದಾರೆ. ಘಟನೆ ಬಗ್ಗೆ ಮಂದಣ್ಣ ಅವರ ಪುತ್ರ ಕೆ.ಎಂ. ನಾಣಯ್ಯ, ತನ್ನ ಪತ್ನಿ ಜ್ಯೋತಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ದಿನೇಶ್, ಸಿಬ್ಬಂದಿಗಳಾದ ವೆಂಕಟ್, ಅನಂತ್, ನವೀನ್ಕುಮಾರ್, ಪೊನ್ನಪ್ಪ ಸೇರಿದಂತೆ ಇತರರು ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದರೊAದಿಗೆ ಮಾವನ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಆರೋಪಿ ಜ್ಯೋತಿಯನ್ನು ವಶಕ್ಕೆ ಪಡೆದಿದ್ದು, ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.