ವೀರಾಜಪೇಟೆ, ಮಾ. ೧೨: ಮಲೆತಿರಿಕೆ ಬೆಟ್ಟದ ಶ್ರೀ ಮುತ್ತಪ್ಪನ್ ಕಾವ್ ದೇಗುಲದ ವಾರ್ಷಿಕ ತೆರೆ ಮಹೋತ್ಸವವು ಭಕ್ತಿಯಿಂದ ನಡೆಯಿತು. ತೆರೆ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ಮುತ್ತಪ್ಪನ್ ಮಲೆ ಎರಕ್ಕಂ, ಗುಳಿಗನ್ ವೆಳ್ಳಾಟಂ, ಮುತ್ತಪ್ಪನ್ ದೇವರ ವೆಳ್ಳಾಟಂ ತೆಲುಗರ ಬೀದಿ
ಶ್ರೀ ಅಂಗಾಳ ಪರಮೇಶ್ವರಿ ದೇವಾಲಯ ದಿಂದ ಮುತ್ತಪ್ಪನ್ ಕಾವ್ ದೇಗುಲದವರೆಗೆ ದೀಪಾರಾಧನೆಯ ಮೆರವಣಿಗೆ ನಡೆಯಿತು. ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ನಗರ, ಸ್ಥಳೀಯ ಗ್ರಾಮಗಳಿಂದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.