ವೀರಾಜಪೇಟೆ, ಮಾ. ೧೨: ಅಂರ್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ವೀರಾಜಪೇಟೆ ತಾಲೂಕಿನ ವಿ. ಬಾಡಗ ಗ್ರಾಮದ ಪೊವ್ವದಿ ಮಹಿಳಾ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಕಾರ್ಯದರ್ಶಿ ಜನಿತಾ ಮಹಿಳಾ ದಿನಾಚರಣೆಯ ವಿಶೇಷತೆ ಬಗ್ಗೆ ಮಾತನಾಡಿದರು. ಪೊವ್ವದಿ ಮಹಿಳಾ ಸಮಾಜದ ಅಧ್ಯಕ್ಷೆ ಪರ್ಲ್ ಮುತ್ತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅಂರ್ರಾಷ್ಟಿçÃಯ ಅಥ್ಲೆಟ್ ಚೇಮಿರ ಪ್ರೇಮಾ ಸೀತಮ್ಮ ಹಾಗೂ ಊರಿನ ಹಿರಿಯರಾದ ಅಪ್ಪಂಡೆರAಡ ಚೋಂದವ್ವ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿ.ಬಾಡಗ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಕೋಲತಂಡ ಭಾರತಿ ಮಂದಣ್ಣ ಅವರನ್ನು ಕೊರೊನಾ ವಾರಿಯರ್ಸ್ ಎಂದು ಗುರುತಿಸಿ ಸಂಘದ ಮೂಲಕ ಸನ್ಮಾನಿಸಲಾಯಿತು.
ಸಮಾಜದ ಆಡಳಿತ ಮಂಡಳಿ ಸದಸ್ಯರು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ಸಂದರ್ಭ ಮಹಿಳೆಯರಿಗೆ ಆಟೋಟ ಸ್ಪರ್ಧೆ, ಮನರಂಜನಾ ಕಾರ್ಯಕ್ರಮ ನಡೆಸಲಾಯಿತು.