ಗೋಣಿಕೊಪ್ಪ ವರದಿ, ಮಾ. ೧೨: ಇಲ್ಲಿನ ಲಯನ್ಸ್ ಶಾಲಾ ಸುವರ್ಣ ಮಹೋತ್ಸವ ಅಂಗವಾಗಿ ನಿರ್ಮಿಸಿರುವ ಮಲ್ಟಿಸ್ಪೋರ್ಟ್ಸ್ ಟರ್ಫ್ ಮೈದಾನವನ್ನು ಉದ್ಘಾಟಿಸ ಲಾಯಿತು. ಶಾಲೆಯ ಎರಡು ತಂಡಗಳು ಪ್ರದರ್ಶನ ಪಂದ್ಯ ಆಡುವ ಮೂಲಕ ಗಮನ ಸೆಳೆದರು. ಶಾಲಾ ವಿದ್ಯಾರ್ಥಿಗಳಿಂದ ಏರೊಬಿಕ್ ನೃತ್ಯ ಮೂಡಿ ಬಂದವು. ಕರಾಟೆ ಪಟುಗಳು ಕರಾಟೆ ಪ್ರದರ್ಶನ ನೀಡಿದ ಗಮನ ಸೆಳೆದರು. ಹಿರಿಯ ಕರಾಟೆ ಪಟು ಜಮ್ಮಡ ಜೋಯಪ್ಪ, ಮೂಡಗದ್ದೆ ವಿಕ್ರಂ ನಡೆಸಿಕೊಟ್ಟರು. ಲಯನ್ಸ್ ಜಿಲ್ಲಾ ಗರ್ನರ್ ಎಸ್. ಸಂಜಿತ್ ಶೆಟ್ಟಿ ಮಾತನಾಡಿ, ಸೇವೆ ದ್ಯೇಯದೊಂದಿಗೆ ಲಯನ್ಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣ, ಕ್ರೀಡೆ, ಸಾಮಾಜಿಕ ಜವಬ್ದಾರಿ ಅರಿತು ಯೋಜನೆ ರೂಪಿಸಿಕೊಳ್ಳಲಾಗಿದೆ. ೫೦ ವರ್ಷ ಪೂರೈಸಿರುವ ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಶಿಕ್ಷಣ ಮತ್ತು ಕ್ರೀಡೆ ತಮ್ಮದೇ ಆದ ಕಾಣಿಕೆ ನೀಡಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಟರ್ಫ್ ಮೈದಾನ ಮತ್ತಷ್ಟು ಕ್ರೀಡಾಕಲಿಗಳ ಬೆಳವ ಣಿಗೆಗೆ ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಪ್ರಗತಿ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ, ಕಾರ್ಯ ದರ್ಶಿ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ಖಜಾಂಚಿ ಚೆಪ್ಪುಡೀರ ಅಪ್ಪಣ್ಣ, ಲಯನ್ಸ್ ಚಾರಿ ಟೇಬಲ್ ಟ್ರಸ್ಟ್ ಮುಖ್ಯಸ್ಥ ಪಾರುವಂಗಡ ಬೋಸ್ ಪೆಮ್ಮಯ್ಯ, ಹಿರಿಯ ಸದಸ್ಯ ಚೆಪ್ಪುಡೀರ ಮುತ್ತಣ್ಣ, ಡಾ. ಮಚ್ಚಮಾಡ ಸೂರಜ್ ಉತ್ತಪ್ಪ ಇದ್ದರು.