ಸುAಟಿಕೊಪ್ಪ, ಮಾ. ೧೧: ವಿಧಾನಸೌಧ ದೇವಾಲಯವಿದ್ದಂತೆ. ಹಾಗೆಯೇ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಜನರ ಆಶೋತ್ತರಗಳನ್ನು ಈಡೇರಿಸುವ ಕಚೇರಿ ದೇವಾಲಯಕ್ಕೆ ಸಮಾನವಾದುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿAದ ನಿರ್ಮಿಸಲಾದ ನೂತನ ಗ್ರಾ.ಪಂ. ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಂಜನ್, ಗ್ರಾಮ ಪಂಚಾಯಿತಿ ನಿಧಿಯಿಂದ ೫ ಲಕ್ಷ ೧೨ ಸಾವಿರ ರೂ, ೪ನೇ ಹಣಕಾಸು ನಿಧಿಯಿಂದ ೭ ಲಕ್ಷ ರೂ., ೧೫ನೇ ಹಣಕಾಸು ನಿಧಿಯಿಂದ ೮ ಲಕ್ಷ ರೂ., ಶಾಸಕರ ನಿಧಿಯಿಂದ ರೂ. ೫ ಲಕ್ಷ, ಎಂಜಿಎಸ್ ಶಾಸಕರ ನಿಧಿಯಿಂದ ರೂ. ೧೬ ಲಕ್ಷ, ಜಿ.ಪಂ.ನಿAದ ರೂ.೧೦ ಲಕ್ಷ ವೆಚ್ಚದಲ್ಲಿ ಉತ್ತಮವಾದ ಗ್ರಾ.ಪಂ. ಕಟ್ಟಡ ನಿರ್ಮಾಣವಾಗಿದೆ. ತಾ.ಪಂ. ಅನುದಾನ ರೂ. ೫ ಲಕ್ಷದಿಂದ ಡಿಜಿಟಲ್ ಗ್ರಂಥಾಲಯ, ಪ್ರತ್ಯೇಕ ನಿಧಿಯಿಂದ ರೂ. ೫ ಲಕ್ಷ ರೂ ವೆಚ್ಚದ ಶೌಚಾಲಯ ನಿರ್ಮಾಣವಾಗಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟಿçÃಯ ಹೆದ್ದಾರಿಯಲ್ಲಿರುವ (೨೭೫) ಗ್ರೇಡ್ ೧ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್ ಯೋಜನೆಯಡಿ ೩ ಕೋಟಿ ರೂ ಮಂಜೂರಾತಿಯಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

ಬಿಜೆಪಿ ಸರಕಾರ ಎಲ್ಲಾ ಧರ್ಮ ಜಾತಿ, ಪಂಗಡ ವರ್ಗದವರಿಗೆ ಮೂಲಭೂತ ಸೌಕರ್ಯ ಒದಗಿಸಿದೆ. ಯುವ ಜನಾಂಗ ಸದೃಢ ಭಾರತ ಕಟ್ಟಲು ಮುಂದೆ ಬರಬೇಕು. ರಾಷ್ಟçಭಕ್ತಿ, ರಾಷ್ಟಾçಭಿಮಾನದಿಂದ ಸುಂದರ ಸಧೃಡ ಸಮಾಜ ಕಟ್ಟಲು ಸಾಧ್ಯವಾಗಲಿದೆ. ಈ ಗ್ರಾ.ಪಂ. ಸದಸ್ಯರುಗಳು, ಅಧಿಕಾರಿಗಳು ಉತ್ತಮ ರೀತಿಯ ಜನೋಪ ಯೋಗಕಾರಿ ಕೆಲಸ ಮಾಡಬೇಕೆಂದು ಹೇಳಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ೫ ಕೋಟಿ ೯೧ ಲಕ್ಷ ರೂ ವೆಚ್ಚದಲ್ಲಿ ಜಲಜೀವನ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ಕಾರ್ಯಗತವಾಗಲಿದೆ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಲಭಿಸಲಿದೆ. ೧೯೬೫ ರಲ್ಲಿ ಪುರಸಭೆ ಆಗಿದ್ದ ಕಾಲದಿಂದ ಆಡಳಿತ ನಡೆಸಿದ ಜನಪ್ರತಿನಿಧಿಗಳನ್ನು ಸನ್ಮಾನಿಸುವ ಕೆಲಸ ಮಾಡಬೇಕೆಂದು ಶಾಸಕರು ಹೇಳಿದರು.

ಕೊಡಗು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ನೂತನ ಮಾರುಕಟ್ಟೆಗೆ ಕನಿಷ್ಟ ೨ ಎಕರೆ ಜಾಗದ ಅವಶ್ಯಕತೆಯಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಶಾಸಕರು, ಗ್ರಾ.ಪಂ. ಆಡಳಿತ ಮಂಡಳಿ ಮುಂದಾಗಬೇಕೆAದರು.

ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಜನರ ವೇದನೆಗಳಿಗೆ ಸ್ಪಂದಿಸುವ ಜಗಜ್ಯೋತಿಯಾಗಿದೆ. ಎಲ್ಲರ ಸಹಕಾರದಿಂದ ಬೃಹದಾ ಕಾರದಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯಿತಿಯಿAದ ಡಾ. ಅಂಬೇಡ್ಕರ್ ಅವರ ಆಶಯದಂತೆ ಸರ್ವರಿಗೂ ಸಮಪಾಲು ಮೂಲ ಭೂತ ಸೌಲಭ್ಯ ದೊರಕುವಂತಾಗಲಿ ಎಂದು ಹೇಳಿದರು.

ಸೋಮವಾರಪೇಟೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ವಿ. ಜಯಣ್ಣ ಮಾತನಾಡಿ, ಕಚೇರಿ ದೇಗುಲವಿದ್ದಂತೆ ಎಂದು ಭಾವಿಸಿ ಸದಸ್ಯರು ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.

ಇದೇ ಸಂದರ್ಭ ಪಂಚಾಯಿತಿ ಕಚೆೆÃರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪಿಡಿಓ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಸಹಾಯಕ ಅಭಿಯಂತರ ಫಯಾಜ್, ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಗುತ್ತಿಗೆದಾರರಾದ ದೇವಿಪ್ರಸಾದ್, ಇಬ್ರಾಹಿಂ ಅವರುಗಳಿಗೆ ಗೌರವಿಸಲಾಯಿತು.

ಈ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಆಲಿಕುಟ್ಟಿ, ಎಂ.ಎಸ್. ಜಿನಾಸುದ್ದೀನ್, ಮಂಜುನಾಥ್, ರಫೀಕ್ ಖಾನ್, ಶಬೀರ್, ಪಿ.ಎಫ್. ಸಬಾಸ್ಟೀನ್, ಬಿ.ಎಂ. ಸುರೇಶ್, ಪಿ.ಆರ್. ಸುನಿಲ್ ಕುಮಾರ್, ಸೋಮನಾಥ್, ನಾಗರತ್ನ ಸುರೇಶ್, ಪಿ.ಜಿ.ಶಾಂತಿ, ಎನ್. ರೇಷ್ಮ, ಮಂಜುಳ, ಮಂಗಳ, ಹಸೀನ, ಮಾಜಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಮಾಜಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಬಿ.ಕೆ. ಮೋಹನ್, ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ, ಪುರಸಭೆ ಮಾಜಿ ಸದಸ್ಯ ಎಂ.ಎ. ವಸಂತ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಮಾಜಿ ಸದಸ್ಯೆ ಗಿರಿಜ ಉದಯಕುಮಾರ್, ಗ್ರಾ.ಪಂ. ಲೆಕ್ಕಾಪರಿಶೋಧಕಿ ಚಂದ್ರಕಲಾ, ಪಂಚಾಯಿತಿ ಸಿಬ್ಬಂದಿಗಳಾದ ಶ್ರೀನಿವಾಸ್, ಸಂದ್ಯಾ, ಡಿ.ಎಂ. ಮಂಜುನಾಥ್ ಹಾಗೂ ಪೌರಕಾರ್ಮಿಕರು ಮತ್ತಿತರರು ಇದ್ದರು.