ಸೋಮವಾರಪೇಟೆ,ಮಾ.೧೨: ತಾಲೂಕಿನ ನಂದಿಗುAದ ಸಮೀಪದ ಎಳನೀರುಗುಂಡಿ ಗ್ರಾಮದ ಕಾಫಿ ತೋಟದ ಹೊಂಡಕ್ಕೆ ಬಿದ್ದ ಕಾಡು ಎಮ್ಮೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ರಕ್ಷಿಸಲಾಗಿದೆ.
ಮಾಲಂಬಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡು ಎಮ್ಮೆಗಳ ಹಿಂಡಿನಿAದ ಬೇರ್ಪಟ್ಟಿದ್ದ ಕಾಡು ಎಮ್ಮೆಯೊಂದು ಎಳನೀರುಗುಂಡಿ ಗ್ರಾಮದ ಗ್ರೀನ್ಹಿಲ್ ಎಸ್ಟೇಟ್ನಲ್ಲಿರುವ ಹೊಂಡಕ್ಕೆ ಬಿದ್ದಿದ್ದು, ಹೊಂಡದ ಸುತ್ತಲೂ ತಡೆಗೋಡೆ ನಿರ್ಮಿಸಿದ್ದರಿಂದ ಮೇಲೆ ಬರಲಾಗದೆ ಅಸಹಾಯಕ ಸ್ಥಿತಿಯಲ್ಲಿತ್ತು. ಇದನ್ನು ತೋಟದ ಕಾರ್ಮಿಕರು ಗಮನಿಸಿ ಮಾಲೀಕರಿಗೆ ಮಾಹಿತಿ ನೀಡಿದ್ದು, ಮಾಲೀಕರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ಶೆಟ್ಟಿ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಹೊಂಡದ ಒಂದು ಭಾಗದಲ್ಲಿ ನಿರ್ಮಿಸಿದ್ದ ತಡೆಗೋಡೆಯನ್ನು ಯಂತ್ರದಿAದ ತೆರವುಗೊಳಿಸಿ ಕಾಡು ಎಮ್ಮೆಯು ಹೊಂಡದಿAದ ಮೇಲೆಬರಲು ದಾರಿಮಾಡಿಕೊಟ್ಟಿದ್ದಾರೆ. ಹೊಂಡದ ಒಂದು ಬದಿ ತೆರವುಗೊಳ್ಳುತ್ತಿದ್ದಂತೆ ‘ಬದುಕಿದೆಯಾ ಬಡಜೀವವೇ’ ಎಂಬAತೆ ಕಾಡು ಎಮ್ಮೆಯು ಹೊಂಡದಿAದ ಮೇಲೆಬಂದು ತೋಟದ ಮೂಲಕ ಮತ್ತೆ ಮಾಲಂಬಿ ಮೀಸಲು ಅರಣ್ಯಕ್ಕೆ ತೆರಳಿದೆ.