ಸೋಮವಾರಪೇಟೆ, ಮಾ. ೧೨: ಇಲ್ಲಿಗೆ ಸಮೀಪದ ಕೋವರ್‌ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ವನದುರ್ಗಿ ದೇವಾಲಯದಲ್ಲಿ ತಾ. ೨೪ರಂದು ೪೯ನೇ ವಾರ್ಷಿಕೋತ್ಸದ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ.

ದೇವಾಲಯದಲ್ಲಿ ಅಂದು ಬೆಳಿಗ್ಗೆ ೫.೩೦ಕ್ಕೆ ಶ್ರೀ ಗಣಪತಿ ಹೋಮ, ೭ ಕ್ಕೆ ಪೂರ್ಣಾಹುತಿ, ೯ಕ್ಕೆ ಶ್ರೀ ದುರ್ಗಹೋಮ, ೧೧.೩೦ ಕ್ಕೆ ಪೂರ್ಣಾಹುತಿ ನಡೆಯಲಿದೆ. ನಂತರ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ ೪ ಗಂಟೆಗೆ ಊರಿನ ಪ್ರಮುಖ ರಸ್ತೆಗಳಲ್ಲಿ ದೇವಿ ವಿಗ್ರಹದ ಮೆರವಣಿಗೆ ಹಾಗೂ ರಾತ್ರಿ ೭ ಗಂಟೆಗೆ ಮಹಾಪೂಜೆ ನಡೆಯಲಿದೆ ಎಂದು ದೇವಾಲಯದ ಅರ್ಚಕ ಬಾಲು ಭಟ್ ತಿಳಿಸಿದ್ದಾರೆ.