ಸುಂಟಿಕೊಪ್ಪ, ಮಾ. ೧೧: ಜೆಸಿಐ ಸಂಸ್ಥೆಯು ತನ್ನ ತತ್ವ ಆದರ್ಶಗಳಿಂದ ಸಮಾಜÀ ಸೆೆÃವೆಯಲ್ಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ. ಎಲ್ಲರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುÀ್ಳವಂತೆÀ ಜೆಸಿಐನ ವಲಯಾಧ್ಯಕ್ಷರಾದ ಯಶಸ್ವಿನಿ ಹೇಳಿದರು.

ಇಲ್ಲಿನ ಸಂತಮೇರಿ ಆಂಗ್ಲ ಮಾಧ್ಯಮ ಸಭಾಂಗಣದಲ್ಲಿ ಸುಂಟಿಕೊಪ್ಪ ಜೆಸಿಐ (ಜೂನಿಯರ್ ಛೇಂಬರ್ ಆಫ್ ಇಂಟರ್ ನ್ಯಾಷನಲ್) ೨೦೨೩ನೇ ಸಾಲಿನ ಘಟಕದ ಜೆಸಿಐನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಾನವರಾದ ನಾವು ಜೀವನದಲ್ಲಿ ಒಂದಲ್ಲಾ ಒಂದು ಸೇವಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಭಗವಂತ ನಮ್ಮೊಂದಿಗೆ ನೆಲೆಯಾಗುತ್ತಾನೆ. ಜೆಸಿಐನಲ್ಲಿ ನಡೆಯುವ ತರಬೇತಿಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಧಕರಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಮಾರ್ ಅವಧಿಯಲ್ಲಿ ಒಂದು ವರ್ಷದ ವಲಯ ಮಟ್ಟದ ಸಾಧನೆಯನ್ನು ಕಿರುಹೊತ್ತಿಗೆ ರೂಪಕ್ಕೆ ತಂದು ಬಿಡುಗಡೆ ಮಾಡಿರುವುದನ್ನು ಶ್ಲಾಘಿಸಿದರು. ಪದಗ್ರಹಣ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಸತೀಶ್ ಕುಮಾರ್ ಅವರು ನೂತನ ಅಧ್ಯಕ್ಷ ಟಿ.ಜಿ. ಪ್ರೇಮ್ ಕುಮಾರ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಜೆಸಿಐನ ವಲಯಾಧ್ಯಕ್ಷೆ ಯಶಸ್ವಿನಿ ಅವರು ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಭೋದಿಸಿದರು. ನಂತರ ನೂತನ ಅಧ್ಯಕ್ಷ ಟಿ.ಜಿ. ಪ್ರೇಮ್ ಕುಮಾರ್ ಮಾತನಾಡಿ, ನನ್ನ ಮುಂದಿನ ಒಂದು ವರ್ಷದ ಅವಧಿಯಲ್ಲಿ ಪರಿಸರ, ಆಹಾರ, ಸಮಾಜ ಸೇವೆ, ವಿದ್ಯಾರ್ಥಿಗಳಿಗೆ ತರಬೇತಿ, ಆತ್ಮಹತ್ಯೆ ತಡೆಗಟ್ಟುವಿಕೆ ಬಗ್ಗೆ ಜೆಸಿಐ ವತಿಯಿಂದ ತರಬೇತಿಗಳು ಹಮ್ಮಿಕೊಂಡು ಉತ್ತಮ ಕೆಲಸ ಮಾಡುವ ಮಹತ್ವಾಕಾಂಕ್ಷೆಯಿAದ ಈ ಹುದ್ದೆಯನ್ನು ಅಲಂಕರಿಸಿರುವ ಸಂಸ್ಥೆಯಲ್ಲಿ ಎಲ್ಲರೂ ನನಗೆ ಸಹಕಾರ ನೀಡಬೇಕೆಂದು ಹೇಳಿದರು.

ವಲಯ ಉಪಾಧ್ಯಕ್ಷ ಜಿಸಿ ನೆಲ್ಸನ್ ಡಿಸೋಜ ಹಾಗೂ ನೂತನ ಅಧ್ಯಕ್ಷ ಟಿ.ಜಿ. ಪ್ರೇಮ್ ಕುಮಾರ್ ನೂತನ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿದರು. ಸಮಾರಂಭದಲ್ಲಿ ಜೇಸಿ ದೇವಿಪ್ರಸಾದ್ ಕಾಯರ್‌ಮಾರ್, ಜೇಸಿ ಮುರುಗೇಶ್, ಜೇಸಿ ಡೆನ್ನೀಸ್ ಡಿಸೋಜ, ಜೇಸಿ ಜಾಯಿದ್ ಅಹಮದ್, ಜೆಸಿ ಹರೀಶ್, ಜೆಸಿ ಅರುಣ್ ಕುಮಾರ್, ಜೆಸಿ ದಿನೇಶ್ ಪೂಜಾರಿ, ಜೆಸಿ ನಂದಕುಮಾರ್, ಜೆಸಿ ಸಂಪತ್ ಕುಮಾರ್, ಜೆಸಿ ಮಂಜುನಾಥ್, ಜೆಸಿ ವೆಂಕಪ್ಪ ಪೂಜಾರಿ ಎಸ್‌ಎಮ್‌ಜಿಎಮ್ ಟ್ರಸ್ಟ್ನ ಅಧ್ಯಕ್ಷ ಮುಖುಲ್ ಮಹೀಂದ್ರ, ಕ.ಸಾ.ಪ. ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಇತರರು ಹಾಜರಿದ್ದರು.