ಸಿದ್ದಾಪುರ, ಮಾ. ೧೨: ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವ ತಾ. ೧೯ ರಿಂದ ೨೧ ರವರೆಗೆ ನಡೆಯಲಿದೆ. ತಾ. ೧೯ ರಂದು ಪ್ರಾತಃಕಾಲ ೬.೩೦ ರಿಂದ ಗಣಪತಿ ಹೋಮದೊಂದಿಗೆ ಉತ್ಸವ ಪ್ರಾರಂಭ ಸಂಜೆ ೬.೩೦ಕ್ಕೆ ತಕ್ಕರ ಮನೆಯಿಂದ ಭಂಡಾರ ಇಳಿಸುವುದು, ೭ ಗಂಟೆಗೆ ಶುದ್ಧ ಕಲಶ, ದೇವರ ಬಲಿ ಬರುವುದು.

ತಾ. ೨೦ ರಂದು ಬೆಳಿಗ್ಗೆ ೧೦.೩೦ಕ್ಕೆ ಸಾಮೂಹಿಕ ಆಶ್ಲೇಷ ಬಲಿ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಸಂಜೆ ೫ಕ್ಕೆ ಪಟ್ಟಣಿ ಪೊದಮ್ಮ ದೇವಾಲಯದಲ್ಲಿ ಅಕ್ಕಿ ಹೇರುವುದು, ದೇವರ ಮೆರವಣಿಗೆ ಮತ್ತು ಮಹಾಪೂಜೆ, ಮಂಗಳಾರತಿ ನಂತರ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ದೇವರ ಮೆರವಣಿಗೆ ಅನ್ನಸಂತರ್ಪಣೆ ನಡೆಯಲಿದೆ. ತಾ. ೨೧ ರಂದು ಬೆಳಿಗ್ಗೆ ೯.೩೦ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧.೩೦ಕ್ಕೆ ಮಹಾಪೂಜೆ, ೨ ಗಂಟೆಗೆ ಅನ್ನಸಂತರ್ಪಣೆ, ಅಪರಾಹ್ನ ೩.೩೦ಕ್ಕೆ ಹಿರಿಯರಿಗೆ ಹಾಗೂ ಮಕ್ಕಳಿಗೆ ತೆಂಗಿನಕಾಯಿ ಕೀಳುವ ಹಾಗೂ ಈಡುಗಾಯಿ ಹೊಡೆಯುವ ಸ್ಪರ್ಧೆ ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವುದು. ಸಂಜೆ ೫ಕ್ಕೆ ದೇವರು ಜಳಕಕ್ಕೆ ಹೊರಡುವುದು ರಾತ್ರಿ ೭.೩೦ಕ್ಕೆ ದೇವರ ಪ್ರದಕ್ಷಿಣೆ, ನಂತರ ಮಹಾಮಂಗಳಾರತಿ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ದೇವಾಲಯದಿಂದ ತಕ್ಕರ ಮನೆಗೆ ಭಂಡಾರ ತಲುಪಿಸುವುದು. ತಾ. ೨೨ ರಂದು ಬೆಳಿಗ್ಗೆ ೧೦.೩೦ ಕ್ಕೆ ಶುದ್ಧ ಕಲಶ, ಮಹಾಪೂಜೆ, ಮಧ್ಯಾಹ್ನ ೧ಕ್ಕೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ.

ಶ್ರೀ ಸತ್ಯನಾರಾಯಣ ಸನ್ನಿಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ದಾನಿಗಳು ದೇವಾಲಯದ ಖಾತೆ ಇರುವ ನೆಲ್ಲಿಹುದಿಕೇರಿ ಗ್ರಾಮದ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ ೦೩೬೦೨೨೦೧೦೦೦೦೬೭೮ ಸಂದಾಯ ಮಾಡುವಂತೆ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.