ಮಡಿಕೇರಿ, ಮಾ. ೧೨: ಗಾಳಿಬೀಡು ಪ್ರೌಢಶಾಲೆಯ ಮೈದಾನದಲ್ಲಿ ಗಾಳಿಬೀಡು ಯುವಕರ ಸಂಘದಿAದ ಆಯೋಜಿಸಲಾಗಿದ್ದ ಗಾಳಿಬೀಡು ಚಾಂಪಿಯನ್ ಕ್ರಿಕೆಟ್ ಲೀಗ್ ಸಮಾರೋಪ ಸಮಾರಂಭ ನಡೆಯಿತು.
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಳುಮುಡಿಯನ ಅನಂತ್ ಕುಮಾರ್ ಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಫೈನಲ್ ಪಂದ್ಯಾಟದ ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ನೆರೆದ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಅನಂತ್ ಕುಮಾರ್ ಗಾಳಿಬೀಡು ಗ್ರಾಮದಲ್ಲಿ ಯುವಕರು ಕ್ರೀಡಾಕೂಟ ಆಯೋಜಿಸಿದ್ದು ಸಂತಸದ ವಿಚಾರ ಎಂದರು.
ನಿವೃತ್ತ ಡಿ.ವೈ.ಎಸ್.ಪಿ ಯಾಲದಾಳು ಕೇಶವಾನಂದ ನೆರೆದವರನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಉದ್ಯಮಿ ಪುಷ್ಪ ಪೂಣಚ್ಚ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನಿಗೆ ನಗದು ಬಹುಮಾನ ನೀಡಿದರು. ಆರು ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಹೆಬ್ಬೆಟ್ಟಗೇರಿಯ ಕೆ.ಪಿ ರಾಕರ್ಸ್ ತಂಡ ಜಯಭೇರಿ ಬಾರಿಸಿತು.
ಗಾಳಿಬೀಡಿನ ಕೆ.ಕೆ ಫ್ರೆಂಡ್ಸ್ ಕೆ.ಪಿ ರಾಕರ್ಸ್ ಎದುರು ಪರಾಭವಗೊಂಡು ರನ್ನರ್ಸ್ ಸ್ಥಾನ ಪಡೆದುಕೊಂಡರೆ, ಹೆಚ್.ಡಿ ಈಗಲ್ಸ್ ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು. ಇನ್ನುಳಿದಂತೆ ಆಕರ್ಷಕ ಬಹುಮಾನವಾಗಿ ಕಾಶಿ ಸಹೋದರರು ನೀಡಿದ ಸೈಕಲ್ ನೆರೆದವರ ಗಮನಸೆಳೆಯಿತು.
ವೇದಿಕೆಯಲ್ಲಿ ತೆಕ್ಕಡ ಕಾಶಿ ಕಾವೇರಪ್ಪ, ಕ್ರೀಡೆಯಲ್ಲಿ ರಾಷ್ಟçವನ್ನು ಪ್ರತಿನಿಧಿಸಿದ್ದ ಜನಾರ್ಧನ, ಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ರವಿ, ಪತ್ರಕರ್ತ ಚಂದನ್ ನಂದರಬೆಟ್ಟು, ಪಂಚಾಯಿತಿ ಸದಸ್ಯ ಗಿರಿ ಮತ್ತಿತರರು ಹಾಜರಿದ್ದರು.