ಹಿರಿಯ ಸಂಶೋಧಕ, ಮೂಲತಃ ನರಿಯಂದಡ ಗ್ರಾಮದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದ ಬೊವ್ವೇರಿಯಂಡ ಎಂ. ಚಿಣ್ಣಪ್ಪ (೮೯) ಅವರು ತಾ. ೧೦ ರಂದು ನಿಧನರಾದರು. ಪಟ್ಟೋಲೆ ಪಳಮೆ ರಚಿಸಿದ ನಡಿಕೇರಿಯಂಡ ದಿ. ಚಿಣ್ಣಪ್ಪ ಅವರ ಮೊಮ್ಮಗನಾಗಿರುವ ಇವರು ಕೊಡವ ಸಂಸ್ಕೃತಿ ಹಾಗೂ ಕೊಡಗಿನ ಐನ್ಮನೆಗಳ ಸಂಶೋಧನೆಯೊAದಿಗೆ ಪಟ್ಟೋಲೆ ಪಳಮೆಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ. ವಿದೇಶದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿ ನಿವೃತ್ತಿಗೊಂಡ ಬಳಿಕ ಮೈಸೂರಿನಲ್ಲಿ ನೆಲೆಸಿ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಡಾ. ನಂಜಮ್ಮ ಸೇರಿದಂತೆ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.