ಕುಶಾಲನಗರ, ಮಾ.೧೦: ಮಡಿಕೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾಲ್ನೂರು ತ್ಯಾಗತೂರು, ನೆಲ್ಲಿಹುದಿಕೇರಿ, ಕೂಡ್ಲೂರು ಚೆಟ್ಟಳ್ಳಿ ಮತದಾರರಿಗೆ ವಿದ್ಯುನ್ಮಾನ ಯಂತ್ರಗಳ ಪ್ರಾತ್ಯಕ್ಷಿಕೆ, ಅಣುಕು ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಈ ಭಾಗದ ಸೆಕ್ಟರ್ ಅಧಿಕಾರಿ ವಿ ಕೆ ಪುಷ್ಪಲತಾ ತಿಳಿಸಿದ್ದಾರೆ. ತಾ. ೧೫ ರಂದು ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತು ಒಂಟಿಅAಗಡಿ ಮತದಾನ ಕೇಂದ್ರಗಳಲ್ಲಿ ನಡೆಯಲಿದೆ. ತಾ.೧೬ ರಂದು ನೆಲ್ಲಿಹುದಿಕೇರಿ, ಬೆಟ್ಟದಕಾಡು, ಬರಡಿ ಕೇಂದ್ರಗಳಲ್ಲಿ ಹಾಗೂ ೧೭ರಂದು ಕೂಡ್ಲೂರು ಚೆಟ್ಟಳ್ಳಿ ವ್ಯಾಪ್ತಿಯ ಮತದಾನ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.