ಮಡಿಕೇರಿ, ಮಾ. ೧೧: ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ೨೦೨೨-೨೩ನೇ ಸಾಲಿನ ‘ಯುಗಾದಿ ಪುರಸ್ಕಾರ’ ಮತ್ತು ‘ಕರುನಾಡ ರತ್ನ’ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ, ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ, ಧಾರ್ಮಿಕ ಸೇವೆ, ಜ್ಯೋತಿಷ್ಯ, ಕ್ರೀಡೆ, ಮಹಿಳಾ ಸಬಲೀಕರಣ, ಯೋಗ ಮುಂತಾದ ಕ್ಷೇತ್ರದ ವಿವಿಧ ಸಾಧಕರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ವಿವರಗಳನ್ನು ಲಗತ್ತಿಸಿ ಪ್ರಶಸ್ತಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕ :೧೫.೦೩.೨೦೨೩.
ಹೆಚ್ಚಿನ ಮಾಹಿತಿಗಾಗಿ : ೯೪೪೮೨೬೦೪೧೭, ೮೬೧೮೦೩೮೩೦೭ ಈ ಸಂಖ್ಯೆಗೆ ಸಂಪರ್ಕಿಸಬಹುದು.