ಶ್ರೀಮಂಗಲ, ಮಾ. ೧೦: ಕಾನೂರು-ಕೋತೂರು ಮಹಿಳಾ ಮಂಡಲ ಸಭಾಂಗಣದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಮಂಡಲದ ಅಧ್ಯಕ್ಷೆ ಚೊಟ್ಟೆಕ್‌ಮಾಡ ಮಾಯಮ್ಮ ಬೋಪಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ದಿನಾಚರಣೆ ಮಹತ್ವ ಮತ್ತು ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ವೀರ ಮಹಿಳೆಯರ ಹೋರಾಟವನ್ನು ಸ್ಮರಿಸಿದರು.

ಮಂಡಲದ ಮಾಜಿ ಅಧ್ಯಕ್ಷೆ ಅಳಮೇಂಗಡ ದೇವಮ್ಮಾಜಿ ತಮ್ಮಯ್ಯ, ಮಾಜಿ ಕಾರ್ಯದರ್ಶಿ ಮಚ್ಚಮಾಡ ಸ್ವಾತಿ ಭೀಮಯ್ಯ ಅವರು ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ದೇವಮ್ಮಾಜಿ ತಮ್ಮಯ್ಯ ಅವರು ಮಹಿಳಾ ಮಂಡಲ ಸ್ಥಾಪನೆ ಮತ್ತು ನಡೆದುಕೊಂಡು ಬಂದ ದಾರಿ ಬಗ್ಗೆ ವಿವರಿಸಿದರು.

ಉಪಾಧ್ಯಕ್ಷೆ ಚೆಪ್ಪುಡೀರ ಬಿಂದು ಪೂಣಚ್ಚ ಪ್ರಾರ್ಥಿಸಿದರು. ಚೆರಿಯಪಂಡ ರೇಷ್ಮಾ ಮನು ನಿರೂಪಿಸಿದರು. ಕಾರ್ಯದರ್ಶಿ ಕುಂಞÂಮಾಡ ನವೀನ ಮುತ್ತಪ್ಪ ಹಾಜರಿದ್ದರು. ಅರ್ಥ್ ತಂಡದಿAದ ಸಾಂಸ್ಕೃತಿಕ ಮತ್ತು ನಾಟಕ ಪ್ರದರ್ಶನ ಗಮನ ಸೆಳೆಯಿತು.