ಸೋಮವಾರಪೇಟೆ, ಮಾ. ೧೧: ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಿವಿಧ ಮಾರುಕಟ್ಟೆ ಹರಾಜು ಪ್ರಕ್ತಿಯೆ ಪಂಚಾಯಿತಿ ಸಭಾಂಗಣದಲ್ಲಿ ನಡೆದು, ಒಟ್ಟಾರೆ ಪ.ಪಂ.ಗೆ ರೂ. ೨೯,೫೦೦ ಲಾಭ ಬಂದಿದೆ.

ಹAದಿ ಮಾಂಸ ಹಾಗೂ ಒಂದು ಕೋಳಿ ಮಾಂಸದ ಮಳಿಗೆ ಹರಾಜಾಗದೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ ನಡೆಯಿತು.

ಪ್ರಸಕ್ತ ವರ್ಷ ಒಟ್ಟು ೨೦,೭೦, ೫೦೦ರೂ ಗಳಿಗೆ ಮಾರುಕಟ್ಟೆ ಮಳಿಗೆಗಳು ಹರಾಜಾಗಿ ೨೯,೫೦೦ ಲಾಭ ಗಳಿಸಿತು. ಸಾರ್ವಜನಿಕರು ವಿವಿಧ ಕಾರಣಗಳಿಂದ ಹರಾಜಿನಲ್ಲಿ ಪೈಪೋಟಿ ನೀಡದೆ ನಿರುತ್ಸಾಹ ತೋರಿದ್ದು ಹೆಚ್ಚಿನ ಲಾಭಕ್ಕೆ ಹೊಡೆತ ಬಿದ್ದಂತಾಗಿದೆ.

ಸೌಲಭ್ಯ ಕಲ್ಪಿಸಲು ಆಗ್ರಹ

ಪಟ್ಟಣದ ಮಾರ್ಕೆಟ್ ಆವರಣದಲ್ಲಿರುವ ಕುರಿ, ಕೋಳಿ ಹಾಗೂ ಹಸಿಮೀನು ಮಾರುಕಟ್ಟೆ ಅತ್ಯಂತ ದುಸ್ಥಿತಿಯಲ್ಲಿದೆ. ಸಮರ್ಪಕ ವ್ಯವಸ್ಥೆ ಕಲ್ಪಿಸಲು ಪಂಚಾಯಿತಿ ಮುಂದಾಗಬೇಕೆAದು ಗ್ರಾಹಕರು ಆಗ್ರಹಿಸಿದ್ದಾರೆ. ಮಾಂಸಾಹಾರ ಮಾರುಕಟ್ಟೆ ಕಟ್ಟಡ ಸೋರುತ್ತಿದೆ, ಸಮರ್ಪಕವಾಗಿ ನೀರು ಹರಿಯು ವುದಿಲ್ಲ, ಕೋಳಿ ತ್ಯಾಜ್ಯ ಸೇರಿದಂತೆ ಇನ್ನಿತರ ಕಸ ಹಾಕಲು ಜಾಗವಿಲ್ಲ. ಈ ಬಗ್ಗೆ ಕಳೆದ ಕೆಲವು ವರ್ಷ ಗಳಿಂದ ಪಂಚಾಯಿತಿ ಆಡಳಿತದ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲವೆಂದು ಸಭೆಯಲ್ಲಿ ವರ್ತಕರು ದೂರಿದರು. ನಾವುಗಳು ಲಕ್ಷಗಟ್ಟಲೆ ಹರಾಜು ಕರೆದು ವ್ಯಾಪಾರ ಮಾಡುತ್ತೇವೆ. ಆದರೆ ಹೊರ ಜಿಲ್ಲೆಯಿಂದ ಬಂದು ಕೆಲವರು ಪ್ರತಿದಿನ ಕೋಳಿ ವ್ಯಾಪಾರ ಮಾಡುತ್ತಾರೆ. ಇದರೊಂದಿಗೆ ಬೆಸ್ತರು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡು ತ್ತಾರೆ. ಇದರಿಂದಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸು ವಂತಾಗಿದೆ. ಮತ್ತೊಂದೆಡೆ ಪಕ್ಕದ ಚೌಡ್ಲು ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಿಮೆ ದರಕ್ಕೆ ಮಳಿಗೆ ಪಡೆದು ಕಡಿಮೆ ದರಕ್ಕೆ ವ್ಯಾಪಾರ ನಡೆಸುತ್ತಿದ್ದಾರೆ. ಆದ್ದರಿಂದ ನಾವು ಅವರೊಡನೆ ಸ್ಪರ್ಧಾತ್ಮಕವಾಗಿ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅವಲತ್ತುಕೊಂಡರು. ಈ ಸಂದರ್ಭ ಅಧ್ಯಕ್ಷ ಚಂದ್ರು ಹಾಗೂ ಮುಖ್ಯಾಧಿಕಾರಿ ನಾಚಪ್ಪ ಪ್ರತಿಕ್ರಿಯಿಸಿ ಮುಂದಿನ ಒಂದೆರಡು ತಿಂಗಳಲ್ಲಿ ಕಟ್ಟಡ ದುರಸ್ತಿಪಡಿಸಲಾಗುವುದು ಹಾಗೂ ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳ ಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಸಂಜೀವ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ, ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರು ಗಳಾದ ಮೋಹಿನಿ, ಶುಭಕರ, ಎಸ್. ಮಹೇಶ್, ಜಯಣ್ಣ, ಬಿ.ಆರ್. ಮಹೇಶ್, ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.