ಮಡಿಕೇರಿ, ಮಾ. ೧೧: ಮೈತಾಡಿ ಶ್ರೀ ಬಿಲ್ಲಯ್ಯಪ್ಪ ದೇವರ ಉತ್ಸವ ತಾ. ೧೪, ೧೫ ಹಾಗೂ ೧೬ರಂದು ನಡೆಯಲಿದೆ. ತಾ. ೧೪ರಂದು ಪಟ್ಟಣಿ, ಅಂದಿ ಬೊಳಕು ತೂಜಂಬಲಿ, ಕ್ಷೇತ್ರಪಾಲ ಪೂಜೆ, ರಾತ್ರಿ ೮ ಗಂಟೆಗೆ ಮಹಾಪೂಜೆ ನಡೆಯಲಿದೆ.
ತಾ. ೧೫ರಂದು ವಿವಿಧ ಪೂಜೆಗಳ ಬಳಿಕ ೧೨ ಗಂಟೆ ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ೨.೩೦ಕ್ಕೆ ಎತ್ತು ಪೋರಾಟ, ಬೊಳಕಾಟ್ ದೇವರ ಮೆರವಣಿಗೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳ ಬಳಿಕ ರಾತ್ರಿ ೮ ಗಂಟೆಗೆ ಮಹಾಪೂಜೆ ಜರುಗಲಿದೆ.
ತಾ.೧೬ರಂದು ಬೊಳಕಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಕಾವೇರಿ ನದಿಯಲ್ಲಿ ದೇವರ ಅವಭೃತ ಸ್ನಾನ ಹಾಗೂ ರಾತ್ರಿ ೧೦ ಗಂಟೆಗೆ ದೇವರ ನೃತ್ಯ, ಮಹಾಪೂಜೆ ನಡೆಯಲಿದೆ.