ಸೋಮವಾರಪೇಟೆ, ಮಾ. ೧೦: ಕೂತಿ ಗ್ರಾಮದ ಶ್ರೀ ಸೋಮೇಶ್ವರ ಯುವಕ ಸಂಘದ ವತಿಯಿಂದ ರಾಜ್ಯಮಟ್ಟದ ಕಬಡ್ಡಿ ಮತ್ತು ಮಹಿಳೆಯರಿಗೆ ಥ್ರೋಬಾಲ್ ಕ್ರೀಡಾಕೂಟ ತಾ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ಕೂತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಮಹಿಳೆ ಮತ್ತು ಪುರುಷರಿಗೆ ಹಗ್ಗಜಗ್ಗಾಟವಿದೆ. ಕಬಡ್ಡಿ ಪ್ರಥಮ ಬಹುಮಾನ ರೂ. ೩೦ ಸಾವಿರ ನಗದು, ದ್ವಿತೀಯ ರೂ. ೨೦ ಸಾವಿರ, ತೃತೀಯ ರೂ. ೧೦ ಸಾವಿರ, ಚತುರ್ಥ ರೂ. ೫ ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಕಾರ್ಯದರ್ಶಿ ಕೆ.ಕೆ. ಲಕ್ಷಿö್ಮÃಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೭೯೭೫೯೭೧೬೮೨, ೯೪೮೨೯೩೮೨೩೯ ಸಂಪರ್ಕಿಸಬಹುದು.