*ಗೋಣಿಕೊಪ್ಪ, ಮಾ. ೯: ಅತ್ತೂರು ಕೊಡವ ಕಲ್ಚರ್ ಮತ್ತು ರಿಕ್ರಿಯೇಷನ್ ಮಹಿಳಾ ಕ್ಲಬ್ ವತಿಯಿಂದ ಹಿರಿಯ ಪ್ರಸೂತಿ ತಜ್ಞೆ ಪಾರುವಂಗಡ ಡಾ. ಗೌರಮ್ಮ ಅವರನ್ನು ಅಂರ‍್ರಾಷ್ಟಿçಯ ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು.

ಅತ್ತೂರು ಕೊಡವ ಕಲ್ಚರ್ ರಿಕ್ರಿಯೇಷನ್ ಕ್ಲಬ್ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷೆ ಕುಪ್ಪಂಡ ತೇಜಸ್ವಿನಿ ಚಂಗಪ್ಪ ಮುಂದಾಳತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಗೌರಮ್ಮ, ಮಹಿಳೆಯರು ಶಿಸ್ತುಬದ್ಧವಾಗಿ ಜೀವನ ನಡೆಸಬೇಕು. ಶುಚಿತ್ವಕ್ಕೆ ಮತ್ತು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕೆಂದು ಹೇಳಿದರು. ಸದಾ ಕೌಟುಂಬಿಕ ಒತ್ತಡದಲ್ಲಿ ದಿನಕಳೆಯುವ ಮಹಿಳೆಯರು ಉತ್ತಮ ಹವ್ಯಾಸವನ್ನು ಮೈಗೂಡಿಸಿಕೊಂಡಾಗ ಮನಸ್ಸಿನ ಏಕಾಗ್ರತೆ ಸಿದ್ದಿಗೆ ಕಾರಣವಾಗಬಲ್ಲದು.

ಈ ನಿಟ್ಟಿನಲ್ಲಿ ಮಹಿಳೆಯರು ವಿವಿಧ ಸಾಂಸ್ಕöÈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಮನೊಲ್ಲಾಸ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ನಿವೃತ್ತ ಶಿಕ್ಷಕಿ ಪುಲಿಯಂಡ ಅಂಬುಜ ಬೋಪಣ್ಣ ಮಾತನಾಡಿ, ಡಾ. ಗೌರಮ್ಮ ಅವರು ಈ ಭಾಗದ ಮಹಿಳೆಯರ ಮತ್ತು ಮಕ್ಕಳ ಪಾಲಿನ ಆಶಾಕಿರಣವಾಗಿದ್ದರು. ಪ್ರಸೂತಿ ಸಂದರ್ಭದಲ್ಲಿ ಮೈಸೂರು, ಮಡಿಕೇರಿ ಭಾಗಗಳೆಡೆಗೆ ತೆರಳಬೇಕಾದ ಅನಿವಾರ್ಯತೆಗೆ ತಡೆಯಾಗಿ ಉತ್ತಮ ಸೇವೆಯನ್ನು ನೀಡುತ್ತಿದ್ದರು. ಸಾಮಾಜಿಕವಾಗಿ ಇವರ ಸೇವೆ ಮೌಲಾಧ್ಯರಿತವಾಗಿದೆ. ಇವರ ಆದರ್ಶ ಗುಣ ಮತ್ತು ಶಿಸ್ತು ಮತ್ತು ಸಂಯಮದ ಬದುಕಿನ ಮಾರ್ಗವನ್ನು ಪ್ರತಿಯೊಬ್ಬರು ಅನುಸರಿಸಬೇಕೆಂದು ಹೇಳಿದರು.

ಸಣ್ಣುವಂಡ ಅನಿತಾ ಚಂಗಪ್ಪ, ಮಾರಮಾಡ ಸವಿತಾ ಪೂಣಚ್ಚ, ಚೆಪ್ಪುಡೀರ ಗೀತಾ ಪೊನ್ನಪ್ಪ ಇದ್ದರು.